ಧಮ೯ಶಾಲದಲ್ಲಿ ನಡೆದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಕುಲದೀಪ್ ಯಾದವ್ ಅವರ ಸ್ಪಿನ್ ಮೋಡಿಗೆ ಕುಸಿದ ಆಂಗ್ಲರು ಇನ್ನಿಂಗ್ಸ್ ಹಾಗೂ 64 ರನ್ ಗಳ ಸೋಲನ್ನು ಅನುಭವಿಸಿದರು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ ಬ್ಯಾಟಿಂಗ್ ಆಯ್ದುಕೊಂಡರು, ಆರಂಭಿಕ ಆಟಗಾರರಾದ ಜಾಕ್ ಕ್ರಾಕ್ವೇಲ್ (79) ರನ್ ಗಳಿಸಿದರೆ ಡಕೆಟ್ (27) ರನ್ ಗಳಿಸಿ ಔಟಾದರು.
ರೂಟ್ (26), ಜಾನಿ ಬೈರ್ಸ್ಟೋ(29) ಹಾಗೂ ವಿಕೆಟ್ ಕೀಪರ್ ಫೋಕ್ಸ್ (24) ರನ್ ಗಳಿಸಿ ಎದುರಾಳಿ ತಂಡಕ್ಕೆ 218 ರನ್ ಗುರಿ ನೀಡಲಾಯಿತು, ಭಾರತದ ಪರವಾಗಿ ಕುಲದೀಪ್ ಯಾದವ್ (5), ಆರ್ . ಅಶ್ವಿನ್ (4) ಹಾಗೂ ರವೀಂದ್ರ ಜಡೇಜಾ (1 )ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (103) ಹಾಗೂ ಯಶಸ್ವಿ ಜೈಸ್ವಾಲ್ (57) ರನ್ ಗಳಿಸಿದರು, ನಂತರ ಬಂದ ಶುಭ್ಮನ್ ಗಿಲ್ (110), ಪಾದಾರ್ಪಣೆ ಪಂದ್ಯವಾಡಿದ ಕನ್ನಡಿಗ ದೇವದತ್ತ್ ಪಡಿಕಲ್ (65) ಹಾಗೂ ಸರ್ಫರಾಜ್ ಖಾನ್ (56) ರನ್ ಗಳಿಸಿ 470 ರ ಗಡಿ ದಾಟಿಸಿದರು.
259 ರನ್ ಗಳ ಹಿನ್ನೆಡೆ ಅನುಭವಿಸಿದ್ದ ಆಂಗ್ಲರು ಎರಡನೇ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಸಿ ಆಲೌಟ್ ಆದರು, ಇಂಗ್ಲೆಂಡ್ ತಂಡದ ಪರವಾಗಿ ಜೋ ರೂಟ್ (84), ಜಾನಿ ಬೈರ್ಸ್ಟೋ (39) ರನ್ ಗಳಿಸಿದ್ದೆ ಗರಿಷ್ಠ ರನ್ ಆಗಿತ್ತು.
ಭಾರತದ ಪರವಾಗಿ ಆರ್ . ಅಶ್ವಿನ್ 5 ವಿಕೆಟ್, ಕುಲದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ತುಲಾ ಎರಡು ವಿಕೆಟ್ ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ನೂರನೇ ಪಂದ್ಯವಾಡಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಎರಡೂ ಇನ್ನಿಂಗ್ಸ್ ನಲ್ಲಿ ಒಂಬತ್ತು ವಿಕೆಟ್ ಪಡೆದು ಮಿಂಚಿದರು, ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.