ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಮನೆಗಳ್ಳತನದ ಆರೋಪಿಯನ್ನು ಇನ್ಸ್ಪೆಕ್ಟರ್ ಶಶಿಧರ್ ರವರ ನೇತೃತ್ವದಲ್ಲಿ ಬಂಧಿಸಿ, ಆತನಿಂದ ಸುಮಾರು 25 ಲಕ್ಷ ರೂ ಮೌಲ್ಯದ 531 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನೇ ಗಮನಿಸಿ ಅಂತಹ ಮನೆಗಳಿಗೆ ಎಂಟ್ರಿ ಕೊಟ್ಟು ಕ್ಷಣಾರ್ಧದಲ್ಲೇ ಚಿನ್ನಾಭರಣ ದೋಚಿ ಆರೋಪಿ ಎಸ್ಕೇಪ್ ಆಗುತ್ತಿದ್ದ.
ಮನೆಕಳ್ಳತನ ಪ್ರಕರಣ ತನಿಖೆ ಜಾಡು ಹಿಡಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ SD ಶಶಿಧರ್ ಹಾಗೂ ತಂಡ ಕೋಲಾರದ ಬಂಗಾರಪೇಟೆ ಮೂಲದ 39 ವರ್ಷದ ಸೈಯ್ಯದ್ ಅಹಮದ್ ಬಿನ್ ಅಬ್ದುಲ್ ಜಬ್ಬರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಅರೋಪಿಯಿಂದ 25 ಲಕ್ಷ ರೂಪಾಯಿ ಮೌಲ್ಯದ 531 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಹಾಗೂ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಇನ್ಸ್ಪೆಕ್ಟರ್ SD ಶಶಿಧರ್ ಮತ್ತು ತಂಡ ವಾರಸುದಾರರಿಗೆ ಹಿಂತಿರುಗಿಸಿದರು.
ಬಂಧಿತ ಆರೋಪಿ ಮೇಲೆ ಈಗಾಗಲೇ ನೆಲಮಂಗಲ ಟೌನ್, ನೆಲಮಂಗಲ ಗ್ರಾಮಾಂತರ, ಮೈಕೋ ಲೇಔಟ್, ಮಾದನಾಯಕನಹಳ್ಳಿ, ತುಮಕೂರು, ಕ್ಯಾತ್ಸಂದ್ರ, ಸಿಟಿ ಮಾರ್ಕೆಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 45ಕ್ಕೂ ಅಧಿಕ ಮನೆಗಳ್ಳತನ ಪ್ರಕರಣ ದಾಖಲಾಗಿದೆ.