ಫೆ.23ರಂದು ಕೊಲಂಬೊದಿಂದ ಆಗಮಿಸಿದ ಒಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕ ಮತ್ತು ಇನ್ನೊಬ್ಬ ದೇಶೀಯ ಪ್ರಯಾಣಿಕ ಸೇರಿ 18,47,688ರೂ. ಮೌಲ್ಯದ 288.54 ಗ್ರಾಂ ತೂಕದ ವಿದೇಶಿ ಮೂಲದ ಚಿನ್ನವನ್ನು ಅರೆ-ಘನ ಪೇಸ್ಟ್ ರೂಪದಲ್ಲಿ ಗೋವಾದಿಂದ ಆಗಮಿಸುವ ದೇಶೀಯ ಪ್ರಯಾಣಿಕರಿಗೆ ಹಸ್ತಾಂತರಿಸುವ ಮೂಲಕ ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ವೇಳೆ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಅದೇರೀತಿ ಫೆ.24ರಂದು ಒಬ್ಬ ಶ್ರೀಲಂಕಾ ಮೂಲದ ಪ್ರಯಾಣಿಕ ಹಾಗೂ ಇಬ್ಬರು ಭಾರತೀಯ ನಾಗರಿಕರು ಸೇರಿ ವಿದೇಶಿ ಮೂಲದ 54,02,525 ಮೌಲ್ಯದ 878.98 ಗ್ರಾಂ. ಚಿನ್ನವನ್ನು ಕಚ್ಚಾ ರೂಪದಲ್ಲಿ ರಹಸ್ಯವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ.
ಕೂಡಲೇ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆಯನ್ನ ಮುಂದುವರಿಸಿದ್ದಾರೆ.