ಸಕ್ಕರೆಗೊಲ್ಲಹಳ್ಳಿ ಎಂ.ಪಿ.ಸಿ.ಎಸ್ ಗೆ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಹರೀಶ್ ಆಯ್ಕೆ: ಗಣ್ಯರಿಂದ ಅಭಿನಂದನೆ

ಫೆ.23ರಂದು ನಡೆದ ಸಕ್ಕರೆಗೊಲ್ಲಹಳ್ಳಿ ಎಂ.ಪಿ.ಸಿ.ಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳು ಜಯಶಾಲಿಗಳಗಿದ್ದು, ಬಿಜೆಪಿ ಕೇವಲ 1 ಸ್ಥಾನ ಜಯಿಸಿದೆ.

ಇದರಲ್ಲಿ ಎಂ.ಪಿ.ಸಿ.ಎಸ್ ಗೆ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಹರೀಶ್ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧಕ್ಷರನ್ನ ಗಣ್ಯರು, ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹೂವಿನಾರ‌ ಹಾಕಿ ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಜಣ್ಣ, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗೆ ಅವಿರತವಾಗಿ ಶ್ರಮಿಸುತ್ತೇನೆ. ಹಾಲು ಉತ್ಪಾದಕರನ್ನ ಉತ್ತೇಜಿಸಿ ಗುಣ್ಣಮಟ್ಟದ ಹಾಲನ್ನ ಡೇರಿಗೆ ನೀಡುವಂತೆ ಪ್ರೋತ್ಸಾಹಿಸಲಾಗುವುದು, ಅದೇರೀತಿ ಹಸುಗಳಿಗೆ ಬೇಕಾಗುವ ಔಷಧಿಗಳು, ಆರೋಗ್ಯ ತಪಾಸಣೆ, ಗುಣಮಟ್ಟದ ಹಸುಗಳ ಆಹಾರ ಸಾಮಗ್ರಿಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *