ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಸರಳ ಹುಟ್ಟುಹಬ್ಬ ಆಚರಣೆ

ಕೋಲಾರ: ಹುಟ್ಟುಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸಿಕೊಳ್ಳುವವರೆ ಜಾಸ್ತಿಯಾಗಿರುವ ಸಂದರ್ಭದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಅವರ ಮಗ ಕೆ.ಜೆ ಕೃಷ್ಣ ಅವರ ಹುಟ್ಟ ಹಬ್ಬವನ್ನು ನಗರದ ಸಾಯಿರಾಮ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾದರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ಗಂಗಮ್ಮನ ಪಾಳ್ಯ ರಾಮಯ, ಜಗದೀಶ್, ಜಯದೇವ್ ಅವರ ತಾಯಿ ಚಂದ್ರಮ್ಮ, ಶ್ರೀಮತಿ ಸುಶೀಲಾ ಸೇರಿದಂತೆ ಸಹೋದರಿಯರು ಅವರ ಅಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *