ದೇವನಹಳ್ಳಿ: ಪೋಷಕರು ಶಾಲೆಯ ಶಿಕ್ಷಣವನ್ನು ಮಕ್ಕಳ ಓದಿನ ಅಂಕಗಳಿಗೆ ಸೀಮಿತಗೊಳಿಸದೇ ದೈಹಿಕ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಕ್ಕಳನ್ನ ಪ್ರೋತ್ಸಾಹಿಸಿ ಅವರ ದೈಹಿಕ, ಮಾನಸಿಕ ಸದೃಢತೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ದೇವನಹಳ್ಳಿ ತಾಲೂಕು ದೈಹಿಕ ಶಿಕ್ಷಣ ಪದವಿ ವೀಕ್ಷಕರು ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ .ಶೇಖರಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿ 2023-24ನೇ ಶಾಲಾ ಕ್ರೀಡೆ ವಾರ್ಷಿಕೋತ್ಸವವನ್ನು “ಎಲೈಟ್ ಇಂಟರ್ನ್ಯಾಷನಲ್ ಸ್ಕೂಲ್ ಒಲಂಪಿಕ್ ಕ್ರೀಡಾಕೂಟ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡೆಗಳ ಜಾಲತಾಣದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಎಲೈಟ್ ಶಾಲೆಯನ್ನು ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಎಲೈಟ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕರಾದ ಶೇಷು, ಎಂ.ರಮೇಶ್, ವೆಂಕಟೇಶ್, ಮಧು, ರಾಜಶೇಖರ್ ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿ, ಪೋಷಕರು ಮತ್ತಿತರರು ಇದ್ದರು.