ಕೋಲಾರ: ತಾಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಪಂ ವ್ಯಾಪ್ತಿಯ ಚಂಜಿಮಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಚಂಜಿಮಲೆ.ಬಿ ರಮೇಶ್ ಮಾತನಾಡಿ, ನಮ್ಮ ಗ್ರಾಮದ ಡೇರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಇರಬೇಕು ಅನಿಟ್ಟಿನಲ್ಲಿ ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡಬೇಕು. ಗ್ರಾಮದ ಪ್ರತಿ ಮನೆಯಲ್ಲಿ ಕನಿಷ್ಠ 25 ಲೀಟರ್ ಹಾಲು ಉತ್ಪಾದಿಸಲು ಬೇಕಾಗುವ ಸಹಕಾರವನ್ನು ಡಿಸಿಸಿ ಬ್ಯಾಂಕ್ ವತಿಯಿಂದ ಕೊಡಿಸಲಾಗುತ್ತದೆ ಎಂದು ತಿಳಿಸಿದರು
ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಶಿಕ್ಷಣ ಜೊತೆಗೆ ಜೀವವಿಮೆ, ಉಚಿತ ಆರೋಗ್ಯ ತಪಾಸಣೆ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸದಾ ದುಡಿಯುವ ಮನಸ್ಸು ಇದ್ದು , ಇವು ಎಲ್ಲವುಗಳನ್ನು ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಜೊತೆಗೆ ನಮ್ಮ ರೈತರು ನಮ್ಮ ಸಂಘಕ್ಕೆ ಗುಣಮಟ್ಟದ ಹಾಲನ್ನ ಸರಬರಾಜು ಮಾಡುವುದರಿಂದ ನಮ್ಮ ಸಂಘ ಬೇಗ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಡಿ ಮುನೇಶ್, ಶ್ರೀನಿವಾಸ್, ರಾಜಪ್ಪ, ಶ್ರೀರಾಮ್, ಗುರುಮೂರ್ತಿ, ಪ್ರಸನ್ನ, ನರಸಿಂಹಪ್ಪ, ಅಲ್ಲ ಬಕಾಶ್, ಪುಷ್ಪ ಮುನ್ನೇಗೌಡ, ದೇವರಾಜ್, ಚಂದ್ರು, ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜು, ಸೀತಾಲಕ್ಷ್ಮಮ್ಮ, ಗೋಪಾಲಪ್ಪ, ಮುಖಂಡರಾದ ಕವಿತಾ ಮುನಿರಾಜ್, ಮುರಳಿ, ಗೋಪಾಲಕೃಷ್ಣ, ವೆಂಕಟೇಶ್, ಕೃಷ್ಣೇಗೌಡ, ಚಂದ್ರಣ್ಣ, ಇ ಚಂದ್ರು, ಸತೀಶ್, ಮನೋಜ್, ನಾರಾಯಣಸ್ವಾಮಿ, ಡೇರಿ ಕಾರ್ಯದರ್ಶಿ ಪಾಪಣ್ಣ, ಸಹಾಯಕರಾದ ಶ್ರೀನಿವಾಸ್, ಮೋಹನ್ ಉಪಸ್ಥಿತರಿದ್ದರು