ರಾಜ್ ಕೋಟ್ ನ ನಿರಂಜನ್ ಶಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ವಿಶ್ವದಾಖಲೆಯ ದ್ವಿಶತಕ ಹಾಗೂ ಬೌಲರ್‌ಗಳ ಉತ್ತಮ ಬೌಲಿಂಗ್ ಪ್ರದರ್ಶನದಿಂದ 434 ರನ್ ಗೆಲುವು ಸಾಧಿಸುವ ಮೂಲಕ ರೋಹಿತ್ ಪಡೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಮೊದಲ ಇನಿಂಗ್ಸ್ ನಲ್ಲಿ ನಾಯಕ ರೋಹಿತ್ ಶರ್ಮಾ (131), ಆಲ್ ರೌಂಡರ್ ರವೀಂದ್ರ ಜಡೇಜಾ (112) ಹಾಗೂ ಪಾದಾರ್ಪಣೆ ಪಂದ್ಯವಾಡಿದ ಸಫ೯ರಾಜ್ ಖಾನ್ (62) ಅರ್ಧಶತಕ ಗಳಿಸಿ, 445 ಗುರಿ ನೀಡಲಾಯಿತು.
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಡಕೆಟ್ (153) ರನ್ ಗಳಿಸಿದರೆ ಉಳಿದ ಬ್ಯಾಟ್ಸ್‌ಮನ್ ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಂಗ್ಲೆಂಡ್ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 319 ರನ್ ಪೇರಿಸಿ 126 ರನ್ ಹಿನ್ನಡೆ ಅನುಭವಿಸಿತು.
ಭಾರತದ ಪರವಾಗಿ ವೇಗಿ ಮೊಹಮ್ಮದ್ ಸಿರಾಜ್(4) , ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ಅಲ್ ರೌಂಡರ್ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು.
126 ರನ್ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (19) ಬೇಗನೆ ವಿಕೆಟ್ ಒಪ್ಪಿಸಿದರು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಶ್ವ ದಾಖಲೆಯ 14 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಅಜೇಯ 214 ರನ್ ಗಳಿಸಿದರೆ , ಶುಭ್ಮನ್ ಗಿಲ್ (91) ಹಾಗೂ ಸಪ೯ರಾಜ್ ಖಾನ್ ಅಜೇಯ (68) ರನ್ ಗಳಿಸಿ ತಂಡದ ಮೊತ್ತವನ್ನು 550ರ ಗಡಿ ದಾಟಿಸಿ ಡಿಕ್ಲೇರ್ ಮಾಡಿಕೊಂಡಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರು ಬೇಗನೇ ವಿಕೆಟ್ ಒಪ್ಪಿಸಿದರು, ವೇಗಿ ಮಾಕ್೯ವುಡ್ (33)ಹೊರತುಪಡಿಸಿ ಬೇರೆ ಯಾರು ಮೂವತ್ತು ರನ್ ದಾಟಲಿಲ್ಲ, 122ರನ್ ಗಳಿಸಿ ತಂಡ ಆಲೌಟ್ ಆಯಿತು, ಭಾರತದ ಪರವಾಗಿ ರವೀಂದ್ರ ಜಡೇಜಾ 5 ವಿಕೆಟ್, ಕುಲದೀಪ್ ಯಾದವ್ 2 ವಿಕೆಟ್, ಬುಮ್ರಾ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದ ಆಲ್ ರೌಂಡರ್ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.