ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಖುದ್ದು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಖಜೂರಿ ಗ್ರಾಮದ ಬಳಿ ನಡೆದಿದೆ.
ಅನ್ನಭಾಗ್ಯ ಅಕ್ಕಿಯನ್ನ ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ ನಡೆಸಲಾಗಿದೆ ಎನ್ನಲಾಗಿದೆ.
ಕಳೆದ ತಡರಾತ್ರಿ ಖಜೂರಿ ಗ್ರಾಮದ ಬಳಿ ಕೆಎ 56 6546 ಸಂಖ್ಯೆಯ ಲಾರಿಯಲ್ಲಿ ಸುಮಾರು 20 ಟನ್‌ಗಳಿಗೂ ಅಧಿಕ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡ್ಯೊಯಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಖಜೂರಿ ಗ್ರಾಮದ ಬಳಿ ಲಾರಿ ಅಡ್ಡಗಟ್ಟಿದ ಗ್ರಾಮಸ್ಥರು ಪರಿಶೀಲನೆ ನಡೆಸಿದ್ದು, ಆಗ ಸ್ಥಳದಿಂದ ಲಾರಿ ಚಾಲಕ ಎಸ್ಕೆಪ್ ಆಗಿದ್ದಾನೆ. ಸದ್ಯ ಲಾರಿಯನ್ನ ಆಳಂದ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.