ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆ 2024ರ ಪ್ರಯುಕ್ತ ಫೆಬ್ರವರಿ 16 ರಂದು ನಡೆಯಲಿರುವ ಮತದಾನ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಟೌನ್, ಮಧುರೆ ಹೋಬಳಿ, ತೂಬಗೆರೆ ಹೋಬಳಿ ವ್ಯಾಪ್ತಿಯ ಶಿಕ್ಷಕ ಮತದಾರರು ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮಿನಿ ವಿಧಾನ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಮತ ಚಲಾಯಿಸಬಹುದಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಳ ಹೋಬಳಿ, ಸಾಸಲು ಹೋಬಳಿ ವ್ಯಾಪ್ತಿಯ ಶಿಕ್ಷಕ ಮತದಾರರು ದೊಡ್ಡಬೆಳವಂಗಲ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಠಡಿ ಸಂಖ್ಯೆ-2ರಲ್ಲಿ ಮತ ಚಲಾಯಿಸಬಹುದಾಗಿದೆ.
ದೇವನಹಳ್ಳಿ ತಾಲೂಕಿನ ಕಸಬಾ ಟೌನ್, ಚನ್ನರಾಯಪಟ್ಟಣ ಹೋಬಳಿ, ಕುಂದಾಣ ಹೋಬಳಿ, ವಿಜಯಪುರ ಹೋಬಳಿ ವ್ಯಾಪ್ತಿಯ ಶಿಕ್ಷಕ ಮತದಾರರು ದೇವನಹಳ್ಳಿ ತಾಲೂಕು ಕಚೇರಿಯ ಮಿನಿ ವಿಧಾನ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಮತ ಚಲಾಯಿಸಬಹುದಾಗಿದೆ.
ಹೊಸಕೋಟೆ ತಾಲೂಕಿನ ಕಸಬಾ ಟೌನ್, ಅನುಗೊಂಡನಹಳ್ಳಿ, ಜಡಿಗೇನಹಳ್ಳಿ, ನಂದಗುಡಿ, ಸೂಲಿಬೆಲೆ ವ್ಯಾಪ್ತಿಯ ಶಿಕ್ಷಕ ಮತದಾರರು ಹೊಸಕೋಟೆ ತಾಲೂಕು ಕಚೇರಿಯ ಮಿನಿ ವಿಧಾನ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಮತ ಚಲಾಯಿಸಬಹುದಾಗಿದೆ.
ನೆಲಮಂಗಲ ತಾಲೂಕಿನ ಕಸಬಾ ವ್ಯಾಪ್ತಿಯ ಶಿಕ್ಷಕ ಮತದಾರರು ನೆಲಮಂಗಲ ತಾಲೂಕು ಕಚೇರಿಯ ಮಿನಿ ವಿಧಾನ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಮತ ಚಲಾಯಿಸಬಹುದಾಗಿದೆ.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಸೋಂಪುರ, ತ್ಯಾಮಗೊಂಡ್ಲು ವ್ಯಾಪ್ತಿಯ ಶಿಕ್ಷಕ ಮತದಾರರು ಸೋಂಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2ರಲ್ಲಿ ಮತ ಚಲಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.