ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ: 55,24,663 ರೂ. ಕಾಣಿಕೆ ಸಂಗ್ರಹ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 55,24,663 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಇಂದು ನಡೆದ‌ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ‌ ಮಾಡಲಾಯಿತು.

ಹುಂಡಿ‌ ಎಣಿಕೆ‌ ಕಾರ್ಯದಲ್ಲಿ 55 ಲಕ್ಷ ನಗದು, 420.600 ಮಿಲಿ ಗ್ರಾಂ. ಚಿನ್ನ, 1ಕೆ.ಜಿ. 390 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ‌.

ಹುಂಡಿ ಎಣಿಕೆ‌ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ‌ ಅಧಿಕಾರಿ ಡಿ.ನಾಗರಾಜ್, ಮುಜರಾಯಿ ತಹಶಿಲ್ದಾರ್ ಜೆ.ಜೆ.ಹೇಮಾವತಿ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ದೇವಾಲಯದ ನಂಜಪ್ಪ, ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯದ‌ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *