ಉತ್ತಮ ಆರೋಗ್ಯಕ್ಕೆ ಸರ್ಕಾರದ ಯೋಜನೆಗಳ ಸದುಪಯೋಗವಾಗಬೇಕು: ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡಿಸಿಕೊಳ್ಳಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು

ನಗರದ ಅಂಜುಮಾನ್ ವಿದ್ಯಾಸಂಸ್ಥೆಯ ಆವರಣದಲ್ಲಿ ಎ.ಜನೈದಿಯಾ ಚಿಶ್ತಿಯಾ ಸಂಘಟನೆ ವತಿಯಿಂದ ಕಲ್ಬುರ್ಗಿಯ ದಿ.ತಾಜ್ ಬಾಬಾ ರವರ ಹೆಸರಿನಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧೀಯ ವಿತರಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿರಲು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಸರಕಾರಗಳು ಯಶಸ್ವಿನಿ, ಆಯುಷ್ಮಾನ್ ಆರೋಗ್ಯ ಕಾರ್ಡ್, ಸೇರಿದಂತೆ ಅನೇಕ ಸೇವೆಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯವಂತ ಪ್ರಜೆಗಳಾಗಬೇಕು ಎಂದರು.

ಸಮಾಜದಲ್ಲಿ ಸಾರ್ವಜನಿಕರು ನಮ್ಮಂತರ ಜನಪ್ರತಿನಿಧಿಗಳಿಗೆ ಹಾಗೂ ಸರಕಾರವನ್ನು ಹಣ, ಜಮೀನು, ಬಂಗಲೆ ಕೊಡಿ ಅಂತ ಕೇಳಲ್ಲ ಅವರು ಕೇಳೋದು ಒಂದೇ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಕೊಡಿ ಅಂತ ಮಾತ್ರವೇ ಆರೋಗ್ಯದ ಕಾಳಜಿ ಇರೋದರಿಂದ ನಗರದ ಸಮಗ್ರ ಅಭಿವೃದ್ಧಿಗಾಗಿ ಸರಕಾರದಿಂದ ವಿಶೇಷ ಅನುದಾನವನ್ನು ತರಲಾಗಿದೆ. ಮುಂದೆ ನಗರವನ್ನು ಮಾದರಿ ನಗರವಾಗಿ ಮಾಡಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಸರಕಾರ ಸಿದ್ದವಿದೆ ಶುದ್ದ ಕುಡಿಯುವ ನೀರು ಉತ್ತಮ ರಸ್ತೆಗಳು ಚರಂಡಿ ಸ್ವಚ್ಚತೆಗೆ ಅಧ್ಯತೆ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳದಂತೆ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಮನುಷ್ಯ ತನ್ನ ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಒತ್ತು ನೀಡುತ್ತಾ ಇಲ್ಲ ಇಂತಹ ಉಚಿತ ಆರೋಗ್ಯ ಶಿಬಿರಗಳು ಮನುಷ್ಯನಿಗೆ ಉತ್ತಮ ಸಹಕಾರಿಯುತ್ತವೆ ಆರೋಗ್ಯಕ್ಕಾಗಿಯೇ ಕಾಂಗ್ರೆಸ್ ಸರಕಾರವು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿನ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಗೆ 10 ಕೋಟಿ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 12.50 ಕೋಟಿ, ಹಾಗೂ ಕ್ಯಾಲನೂರುಗೆ 4 ಸೇರಿದಂತೆ ಸುಮಾರು 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ತಾಜ್ ಬಾಬಾ ಸಂಸ್ಥೆಯ ಹಜ್ ಬಾಬಾ ಮಾತನಾಡಿ, ಈ ಶಿಬಿರದ ತಪಾಸಣೆಯಲ್ಲಿ ಭಾಗವಹಿಸಿದ ರೋಗಿಗಳು ನಗರದ ವಿಂಗ್ಸ್ ಇ.ಟಿ.ಸಿ.ಎಂ, ವಂಶೋಧಯ, ನಾರಾಯಣ ಹಾಸ್ಪಿಟಲ್, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಚೌಡೇಶ್ವರಿ ಸೇರಿಂದತೆ ಇನ್ನೂ ಹಲವಾರು ಆಸ್ಪತ್ರೆಗಳು ಪಾಲ್ಗೊಳ್ಳ ಬಹುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ನಿಸಾರ್ ಅಹಮದ್, ತಾಜ್ ಬಾಬಾ ಸಂಸ್ಥೆಯ ಸಿರಾಜ್ ಬಾಬಾ, ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ನಗರಸಭೆ ಸದಸ್ಯರಾದ ಅಂಬರೀಷ್, ಅಫ್ಸರ್, ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ ಮುಖಂಡರಾದ ಅಬ್ದುಲ್ ಖಯ್ಯಾಮ್, ನಿಸಾರ್ ಅಹಮದ್ ಖಾನ್, ಮೈಲಾಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲಗೌಡ, ವೈ ಶಿವಕುಮಾರ್, ಇಮ್ರಾನ್, ಅಶ್ವಾಕ್, ರಿಯಾಜ್, ವಾಜೀದ್, ಮನ್ಸೂರ್, ಅಸ್ಸದ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *