ಕೊಡಗಿನಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪ್ರವಾಸಿಗರು, ಸ್ಥಳೀಯರು, ಸಾರ್ವಜನಿಕರು ಸೇರಿದಂತೆ ಬಹುತೇಕರು ತ್ಯಾಜ್ಯವನ್ನು ವಿಲೇವಾರಿ ಮಾಡಲು ಅರಣ್ಯ ಪ್ರದೇಶವನ್ನು ಅವಲಂಬಿಸಿರುವುದು ಸಹಜವಾಗಿದೆ.
ಇದೀಗ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆನೆ ಕಂದಕವನ್ನು ನಿರ್ಮಿಸಿದ್ದು, ಇದೀಗ ಈ ಕಂದಕಗಳೆಲ್ಲವೂ ಕೂಡ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದೆ. ಮಾಲ್ದರೆಯ ಅರಣ್ಯದಲ್ಲಿ ಆನೆ ಕಂದಕವನ್ನೇ ಕಸದ ತೊಟ್ಟಿ ಮಾಡಿ ವನ್ಯ ಸಂಕುಲವನ್ನು ನಾಶ ಮಾಡುತ್ತಿರುವ ಕಿಡಿಗೇಡಿಗಳು. ಅರಣ್ಯ ಇಲಾಖೆ ಸಿ.ಸಿ.ಟಿ.ವಿ ಅಳವಡಿಸಿ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ತ್ಯಾಜ್ಯವಿಲೇವಾರಿಗೆ ಸೂಕ್ತವಾದ ಕೇಂದ್ರವಿಲ್ಲದೆ ಮೈಸೂರು ಮತ್ತು ಬೇರೆ ಜಿಲ್ಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ವಿವಿಧ ಕಸಗಳನ್ನು ನಿರ್ಮೂಲನೆ ಮಾಡುವ ಘಟಕಗಳು ಇವೆ. ಜಿಲ್ಲೆಯಲ್ಲಿ ಇದುವರೆಗೂ ಕೂಡ ಇದನ್ನು ಆರಂಭಿಸುವ ಸಾಹಸ ಸರ್ಕಾರವಾಗಲಿ ಅಥವಾ ಖಾಸಗಿ ಸಂಸ್ಥೆಯವರಾಗಲಿ ಮಾಡದಿರುವುದೇ ಎಲ್ಲ ಸಮಸ್ಯೆಗೆ ಮೂಲ ಕಾರಣವಾಗಿದೆ ಎನ್ನಲಾಗಿದೆ.