ರಥ ಎಳೆಯುವ ಉತ್ಸಾಹದಲ್ಲಿ ಕೆಳಕ್ಕೆ ಬಿದ್ದ ಭಕ್ತರು: ರಥದ ಚಕ್ರದಡಿಗೆ ಸಿಲುಕಿದ 7 ಮಂದಿ ಭಕ್ತರು: ಡಿವೈಎಸ್ಪಿ, ಪತ್ರಕರ್ತನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥ ಎಳೆಯುವಾಗ ನೂಕುನುಗ್ಗಲಿ‌ನಲ್ಲಿ ಆಯತಪ್ಪಿ ಚಕ್ರದಡಿಗೆ ಸಿಲುಕಿದ್ದ ಏಳು ಮಂದಿ ಭಕ್ತರನ್ನು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಿ.ರವಿ ಹಾಗೂ ಪತ್ರಕರ್ತ ಶಿವರಾಜ್ ನೇಸರ ಅವರು ಪ್ರಾಣಾಪಾಯದಿಂದ ಪಾರು ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ.

ರಥ ಎಳೆಯುವ ಉತ್ಸಾಹದಲ್ಲಿ ಭಕ್ತರು ಕೆಳಕ್ಕೆ ಬಿದ್ದರು. ಅಲ್ಲಿಯೇ ಜನರನ್ನು ನಿಯಂತ್ರಿಸುತ್ತಿದ್ದ ಡಿವೈಎಸ್ಪಿ ರವಿ ಅವರು ರಥ ನಿಲ್ಲಿಸುವಂತೆ ಕೂಗಿಕೊಂಡರು. ಆದರೆ, ಯಾರೂ ಕಿವಿಗೊಡಲಿಲ್ಲ. ಆಗ ಪತ್ರಕರ್ತ ಶಿವರಾಜ ನೇಸರ ಅವರು ಮಹಿಳೆ ಸೇರಿದಂತೆ 7 ಜನರನ್ನು ಚಕ್ರ ಸಾಗುವ ಹಾದಿಯಿಂದ ಹೊರದೂಡಿ ಅಪಾಯದಿಂದ ಪಾರು ಮಾಡಿ ಮಾನವೀಯತೆ ಮೆರೆದಿದ್ದಾರೆ. ಆ ಬಳಿಕ ಚಕ್ರ ಮುಂದಕ್ಕೆ ಸಾಗಿತು. ಒಟ್ಟಾರೆ ಅಧಿಕಾರಿ ಹಾಗೂ ಪತ್ರಕರ್ತರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಅವಘಡವೊಂದು ತಪ್ಪಿದೆ.

Leave a Reply

Your email address will not be published. Required fields are marked *