2023ನೇ ಸಾಲಿನ ಸ್ವಚ್ಛ ನಗರಗಳ ಫಲಿತಾಂಶ ಪ್ರಕಟ: ಸತತ 7ನೇ ಬಾರಿಗೆ ಸ್ವಚ್ಛನಗರಿ ಪ್ರಶಸ್ತಿ ಪಡೆದ ಇಂದೋರ್: 23ನೇ ಸ್ಥಾನಕ್ಕೆ ಕುಸಿದ ಮೈಸೂರು ನಗರಿ

2023ನೇ ಸಾಲಿನ ಸ್ವಚ್ಛ ನಗರಗಳ ಫಲಿತಾಂಶ ಪ್ರಕಟವಾಗಿದ್ದು, ಅತ್ಯುತ್ತಮ ರಾಜ್ಯಗಳ ಪೈಕಿ ಮಹಾರಾಷ್ಟ್ರವು ಅಗ್ರಸ್ಥಾನ ಪಡೆದುಕೊಂಡಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ನಂತರದ ಸ್ಥಾನದಲ್ಲಿದೆ. ಗಂಗಾ ನದಿ ಪಾತ್ರದ ನಗರಗಳ ಪೈಕಿ ವಾರಣಾಸಿ ಮತ್ತು ಪ್ರಯಾಗ್​ರಾಜ್​ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಕೇಂದ್ರ ಸರ್ಕಾರವು ವಾರ್ಷಿವಾಗಿ ನಡೆಸುವ ಸ್ವಚ್ಛತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ ಏಳನೇ ಬಾರಿಗೆ ದೇಶದ ಸ್ವಚ್ಛನಗರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗುಜರಾತ್​ನ ಸೂರತ್ ಎರಡನೇ ಸ್ಥಾನ, ನವಿ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಬಾರಿ ಟಾಪ್ 10 ಸ್ಥಾನ ಪಡಯುವಲ್ಲಿ ರಾಜ್ಯ ವಿಫಲವಾಗಿ, ಮೈಸೂರು ನಗರಿ 23ನೇ ಸ್ಥಾನಕ್ಕೆ ಕುಸಿದಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

Leave a Reply

Your email address will not be published. Required fields are marked *