ರೈತರ ನೆಮ್ಮದಿಗೆ ಟಿಎಪಿಸಿಎಂಎಸ್ ಕಾಂಗ್ರೆಸ್ ವಶವಾಗಬೇಕು: ಕೊತ್ತೂರು ಮಂಜುನಾಥ್

ಕೋಲಾರ: ರೈತರು ಈ ದೇಶದ ಆಸ್ತಿ ಅವರ ಅಭಿವೃದ್ಧಿಗಾಗಿ ನೆಮ್ಮದಿಯಿಂದ ಬದುಕಲು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾಗಿದೆ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಚುನಾವಣೆ ಎದುರಿಸಲು ತಯಾರಿ ನಡೆಸಿಕೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ನಗರದ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋಲಾರ ತಾಲ್ಲೂಕು ವ್ಯವಸಾಯ ಸೇವಾ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು ಕೋಲಾರ ತಾಲೂಕು ಸೊಸೈಟಿಯು ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿಯಿಂದ ಒಗ್ಗಟ್ಟಿನಿಂದ ಸಹಕಾರಿ ಕ್ಷೇತ್ರವನ್ನು ಕಾಂಗ್ರೆಸ್ ಕೈ ವಶ ಮಾಡಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನಾಮಪತ್ರ ಸಲ್ಲಿಕೆ ಪರಿಶೀಲಿಸಲಾಗಿದೆ‌‌. ನಾಮಪತ್ರ ವಾಪಸ್ ಗೆ ಇಂದು ಕೊನೆಯ ದಿನ ಮುಗಿದಿದೆ. ಸಿ.ಬೈರೇಗೌಡರು ಹಾಗೂ ಕೆ.ಶ್ರೀನಿವಾಸಗೌಡ ಅವರಂಥ ಗಟ್ಟಿ ನಾಯಕರು ಸಹಕಾರ ಸಂಘದಲ್ಲಿ ಇದ್ದ ಕಾರಣ 40 ವರ್ಷದಿಂದ ಚುನಾವಣೆ ನಡೆದಿರಲಿಲ್ಲ ಈಗ ನಡೆಯತ್ತಾ ಇದ್ದು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಜೊತೆಯಾಗಿವೆ. ಇನ್ನೂ ಮುಂದೆ ಎಲ್ಲಾ ಚುನಾವಣೆಯಲ್ಲಿ ಒಂದಾಗಿಯೇ ಹೆಜ್ಜೆ ಇಟ್ಟಿವೆ‌. ಹೀಗಾಗಿ, ನಾವು ಒಗ್ಗಟ್ಟಿನಲ್ಲಿ ಚುನಾವಣೆ ನಡೆಸಬೇಕು ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲರೂ ಗೆಲ್ಲಬೇಕು ನಮ್ಮ ಕಾರ್ಯಕರ್ತರನ್ನು ಬಲಿಕೊಟ್ಟು ಸುಮ್ಮನಿರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೆ ಕೈಚೆಲ್ಲಬಾರದು  ಎಂದರು.

ರೈತರ ನೆಮ್ಮದಿ ಸಂತೋಷವನ್ನು ಕೊಡಿಸುವ ಸಂಸ್ಥೆಯಾಗಿ ಸೊಸೈಟಿ ಕೆಲಸ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಾ ಇದೆ. ಅಭ್ಯರ್ಥಿಗಳು ಸಿಂಡಿಕೇಟ್ ಬಿಟ್ಟು ಹೋಗುವುದಿಲ್ಲ ಎಂದು ಪ್ರತಿ ಅಭ್ಯರ್ಥಿಗಳ ಕೈಯಿಂದ ಪ್ರಮಾಣ ಮಾಡಿಸಿಕೊಂಡು ಪ್ರಚಾರ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಗನಾಳ‌ ಸೋಮಣ್ಣ ಮಾತನಾಡಿ, ಸುಮಾರು 300 ಹಳ್ಳಿಗಳಿಂದ 1942 ಮತಗಳಿದ್ದು, ಎಲ್ಲರೂ ಸೇರಿ ಗೆಲ್ಲಿಸಲು ಕೆಲಸ ಮಾಡಬೇಕು. ಪ್ರತಿ ಮತಕ್ಕೂ ಮೌಲ್ಯವಿದೆ. ಮೊದಲ ಬಾರಿ ಚುನಾವಣೆ ನಡೆಯುತ್ತಿದೆ ಸೊಸೈಟಿಯಿಂದ ರೈತರ ಅಭಿವೃದ್ಧಿಗೆ ಕಾರಣವಾಗಿದ್ದೇವೆ. ಮಾದರಿ ಸೊಸೈಟಿ ಮಾಡಿದ್ದನ್ನು ಮತದಾರರಿಗೆ ಮನವರಿಕೆ ಮಾಡುವ ಮೂಲಕ ಮತ ಕೇಳೋಣ ಎಂದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಮಾತನಾಡಿ, 1980ರಲ್ಲಿ ಚುನಾವಣೆ ನಡೆದಿತ್ತು‌. ಆನಂತರ ಚುನಾವಣೆ ನಡೆದಿರಲಿಲ್ಲ. ಈಗ ಚುನಾವಣೆ ನಡೆಯುತ್ತಿದೆ. ಬೈರೇಗೌಡ ಕಾಲದಲ್ಲಿ ನಾವೆಲ್ಲಾ ಕಾಂಗ್ರೆಸ್ ವಿರೋಧಿಗಳಾಗಿದ್ದೆವು. ಕೊತ್ತೂರು ಮಂಜುನಾಥ್ ಶಾಸಕರಾದ ಮೇಲೆ ಅಭಿವೃದ್ಧಿ ಕಾಣುತ್ತಿದೆ. ಎಲ್ಲರೂ ಒಟ್ಟಿಗೆ ಸೇರಿ ಚುನಾವಣೆ ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಮಾತನಾಡಿ ಗ್ರಾಪಂ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದ್ದೇವೆ ಅದೇ ರೀತಿಯಲ್ಲಿ ತಾವುಗಳು ಜವಾಬ್ದಾರಿ ತೆಗೆದುಕೊಂಡು, ನಾವೇ ಅಭ್ಯರ್ಥಿ ಎಂದುಕೊಂಡು ಪ್ರಚಾರ ನಡೆಸಬೇಕು. ಸಹಕಾರ ರಂಗದಲ್ಲಿ ಪರಸ್ಪರ ಸಹಕಾರ ‌ಅಗತ್ಯ ಎಂಬುದನ್ನು ಹಳ್ಳಿಗಳಲ್ಲಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಅರಹಳ್ಳಿ ಗೋಪಾಲಕೃಷ್ಣ, ವಕ್ಕಲೇರಿ ರಾಜಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮುಂತಾದವರು ಇದ್ದರು

Leave a Reply

Your email address will not be published. Required fields are marked *