ಕೇಪ್ ಟೌನ್ (ದಕ್ಷಿಣ ಆಫ್ರಿಕಾ) ನಿಂದ ಮಗದನ್ (ರಷ್ಯಾ) ವರೆಗೆ ಇರುವ ರಸ್ತೆಯನ್ನ ನಾವು ವಿಶ್ವದ ಅತಿ ಉದ್ದದ ರಸ್ತೆ ಮಾರ್ಗ ಎಂದು ಗುರುತಿಸಲಾಗಿದೆ.
ವಿಮಾನಗಳು ಅಥವಾ ದೋಣಿಗಳನ್ನು ಬಳಸದೆ ಕೇವಲ ರಸ್ತೆ ಮಾರ್ಗದಲ್ಲಿರುವ ಅತಿ ಉದ್ದದ ತಡೆರಹಿತ ರಸ್ತೆ ಮಾರ್ಗ ಇದಾಗಿದೆ.
22,387 ಕಿಲೋಮೀಟರ್ (13911 ಮೈಲುಗಳು) ದೂರದ ಈ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು 4,492 ಗಂಟೆಗಳು ಬೇಕು. ತಡೆರಹಿತವಾಗಿ ನಡೆಯುವುದು ನಡೆದರೆ 187 ದಿನಗಳು. ದಿನಕ್ಕೆ 8 ಗಂಟೆಯಂತೆ ನಡೆದರೆ 561 ದಿನಗಳು ದಿನಗಳು ಬೇಕು. ಈ ಮಾರ್ಗದಲ್ಲಿ ಒಟ್ಟು 17 ದೇಶಗಳು, ಆರು ಸಮಯ ವಲಯಗಳು ಹಾದು ಹೋಗುತ್ತವೆ. ದೀರ್ಘ ಸಮಯದ ಪ್ರಯಾಣದಲ್ಲಿ ವರ್ಷದ ಬಹುತೇಕ ಎಲ್ಲಾ ಋತುಗಳು ಕೂಡ ಕಳೆದು ಹೋಗುತ್ತವೆ.