ಎಣ್ಣೆ ಪಾರ್ಟಿ ವೇಳೆ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನ ಭೀಮಸಂದ್ರ ಬಳಿಯಿರುವ ಬೆತ್ತಲೂರಿನಲ್ಲಿ ನಡೆದಿದೆ.
ನಿರಂಜನ್ (35), ಕೊಲೆಯಾದ ಮೃತ ದುರ್ದೈವಿ.
ನಿನ್ನೆ ಕ್ರಿಸ್ ಮಸ್ ಹಬ್ಬದ ಹಿನ್ನೆಲೆ. ಸ್ನೇಹಿತರೆಲ್ಲರು ಸೇರಿ ಎಣ್ಣಿ ಪಾರ್ಟಿ ಮಾಡಲಾಗಿತ್ತು. ಈ ವೇಳೆ ಬೆತ್ತಲೂರು ನಿವಾಸಿಗಳಾದ ಮಧು ಹಾಗೂ ನಿರಂಜನ್ ನಡುವೆ ಗಲಾಟೆ ಶುರುವಾಗಿದೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ಮಧು ಹಾಗೂ ಸಹಚರರು ನಿರಂಜನ್ ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಕೊಲೆಗೈದು ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆರೋಪಿ ಮಧು(40), ರೌಡಿಶೀಟರ್ ಎಂದು ಹೇಳಾಗುತ್ತಿದೆ. ಕೊಲೆಯಾದ ನಿರಂಜನ್ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು ಗ್ರಾಮಾಂತರ ಪೊಲೀಸರಿಂದ ತನಿಖೆ ಮುಂದುವರಿದಿದೆ.