ಬೂತ್ ಮಟ್ಟದಿಂದ ಜೆಡಿಎಸ್ ಪಕ್ಷವನ್ನ ಬಲಪಡಿಸಲು ಸಿದ್ಧತೆ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಹಾಗೂ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತೆ ಹೊಸ ಚೈತನ್ಯ ತುಂಬುವ ಸಲುವಾಗಿ ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದರು.

ನಗರದ ಒಕ್ಕಲಿಗರ ಭವನದಲ್ಲಿ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆಶ್ವಾಸನೆ‌ ನೀಡಿದರು.

2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸೋಲು ಕಂಡಿದ್ದು, ನಮ್ಮ ಸೋಲಿಗೆ ಕೆಲ ಕೆಟ್ಟ ಶಕ್ತಿಗಳೇ ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ಸೋಲಿನಿಂದ ಹೊರಬಂದು ತಾಲ್ಲೂಕಿನ ಪ್ರತಿ ಕಾರ್ಯಕರ್ತರಿಗೆ ಪಕ್ಷ ಸಂಘಟಿಸಲು ಹೊಸ ಹುಮ್ಮಸ್ಸು ತುಂಬಲು ಈ ಕಾರ್ಯಕ್ರಮವನ್ನು ರಾಜ್ಯ ಹಾಗೂ ತಾಲ್ಲೂಕಿನ ವರಿಷ್ಠರ ಅನುಮತಿಯ ಮೇರೆಗೆ ಆಯೋಜನೆ ಮಾಡಿದ್ದೇವೆ. ಕಾರ್ಯಕರ್ತರ ಶ್ರಮ ಇಂದಿನ ಕಾರ್ಯಕ್ರಮದ ಯಶಸ್ಸು ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮೈತ್ರಿ ಕುರಿತು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತ ವೈಖರಿ ಸಮಾಜಮುಖಿ ಕಾರ್ಯಗಳ ಬಗೆಗಿನ ಒಲವು ಜೊತೆಗೆ ಬಿಜೆಪಿ ನೀಡಿರುವ ಆಹ್ವಾನವನ್ನು ಜೆಡಿಎಸ್ ಪಕ್ಷ ಒಪ್ಪಿಕೊಂಡಿದೆ. ಈ ಹಿನ್ನೆಲೆ ಮಾಜಿ ಪ್ರಧಾನಮಂತ್ರಿ ಹಾಗೂ ಪಕ್ಷದ ವರಿಷ್ಠರು ಆದ ಹೆಚ್. ಡಿ.ದೇವೇಗೌಡ ರವರು ಹಾಗೂ ಮಾಜಿ ಮುಖ್ಯಮಂತ್ರಿ, ರಾಜ್ಯ ವರಿಷ್ಠರು ಆದ ಎಚ್.ಡಿ ಕುಮಾರಸ್ವಾಮಿಯವರು ಕೇಂದ್ರ  ಬಿಜೆಪಿ ಜೊತೆ ಮೈತ್ರಿಗೆ  ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ವರಿಷ್ಠರ ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಇದು ಗೌರವ ಪೂರ್ಣ ಮೈತ್ರಿ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ನಮ್ಮ ಪಕ್ಷದ ವರಿಷ್ಠರು ಸಾಧಕ ಬಾಧಕಗಳನ್ನು ಯೋಚಿಸಿಯೇ ಈ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ತಮ್ಮ ಪಕ್ಷದ ಮುಂದಿನ ಯೋಜನೆಗಳನ್ನು ಕುರಿತು ಮಾತನಾಡಿದ ಅವರು, ನಮ್ಮ ತಾಲ್ಲೂಕಿನಲ್ಲಿ ಪಕ್ಷದ ವತಿಯಿಂದ ಯಾವುದೇ ಕಾರ್ಯಕ್ರಮವನ್ನು ರೂಪಿಸಿದರು ನಗರ ಹಾಗೂ ಗ್ರಾಮಾಂತರ ಭಾಗದ ಎಲ್ಲರನ್ನೂ ಒಳಗೊಂಡಂತೆ ರೂಪಿಸಲಾಗುವುದು. ನಮ್ಮ ಪಕ್ಷವನ್ನು  ನಗರ ಭಾಗದಲ್ಲಿ ಬಲ ಪಡಿಸುವ ಅವಶ್ಯಕತೆ ಇದ್ದು, ನಗರ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಷ್ಟು ಶ್ರಮವಹಿಸಬೇಕಿದೆ. ಜನರ ಮನಸ್ಸನ್ನು ಸೇವೆ ಮಾಡುವ  ಮುಖಾಂತರ ಪರಿವರ್ತನೆ ಮಾಡಿ ಎಂದು ತಿಳಿಸಿದರು.

ತಾವು ಮುಂದೆ ತಾಲ್ಲೂಕಿನ ಪ್ರತಿ ಬೂತ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಭೆಗಳ ಆಯೋಜನೆ  ಪಡುವ ಮುಖಾಂತರ ಮತ್ತಷ್ಟು ಸಕ್ರಿಯರಾಗಿ ಸೇವೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ತಾಲ್ಲೂಕಿನ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಅಪ್ಪಯ್ಯಣ್ಣ ಮಾತನಾಡಿ ಕಾರ್ಯಕ್ರಮದ ಆಯೋಜನೆ ಸುಲಭದ ಮಾತಲ್ಲ ಹರೀಶ್ ಗೌಡ ರವರ ಧೈರ್ಯ ಕಾರ್ಯಕರ್ತರ ಹುಮ್ಮಸ್ಸು ಈ ಕಾರ್ಯಕ್ರಮದ ಆಯೋಜನೆಗೆ ಪ್ರಮುಖ ಕಾರಣ, ಜೆಡಿಎಸ್  ಕಾರ್ಯಕರ್ತರ ಪಕ್ಷ, ಕೆಲ ಕಾರಣಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಮುಂದೆ ಈ ರೀತಿ ಸಲ್ಲದು. ಹರೀಶ್ ಗೌಡ ರಂತಹ ಉತ್ತಮ ನಾಯಕತ್ವ ತಾಲ್ಲೂಕಿಗೆ ದೊರೆತ್ತಿದ್ದು, ಜೆಡಿಎಸ್ ಪಕ್ಷ ಪ್ರಬಲ ಪಕ್ಷವಾಗಿ ತಾಲ್ಲೂಕಿನಲ್ಲಿ ಹೊರಹೊಮ್ಮಲಿದೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ತಾಲ್ಲೂಕಿನಲ್ಲಿ ಕಾರ್ಯಕರ್ತರ ಮನೋಬಲ ಹೆಚ್ಚಿಸಲು ನಮ್ಮ ಪಕ್ಷ ಮುಂದಾಗಿದ್ದು, ಮುಂದಿನ ಚುನಾವಣೆಗಳನ್ನು ಪ್ರಬಲವಾಗಿ ಎದುರಿಸಲಿದ್ದೇವೆ. ತಾಲ್ಲೂಕಿನಲ್ಲಿ ಜೆಡಿಎಸ್ ಬೆಂಬಲಿಗರ ಸಂಖ್ಯೆ ಅಪಾರವಾಗಿದೆ. ನಮ್ಮ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಶ್ರಮದಿಂದ ಬೆಂಬಲಿಗರ ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡರಾದ ಕುರುವಿಗೆರೆ ನರಸಿಂಹಯ್ಯ, ಸ್ಥಾಯಿಸಮಿತಿ ಅಧ್ಯಕ್ಷರಾದ  ವಡ್ಡರಹಳ್ಳಿ ರವಿ, ನಗರ ಸಭಾ ಸದಸ್ಯರಾದ ತ. ನಾ. ಪ್ರಭುದೇವ್, ಕೊನಘಟ್ಟ ಆನಂದ್, ಪ್ರವೀಣ್ ಶಾಂತಿನಗರ ಹಾಗೂ ತಾಲ್ಲೂಕಿನ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು .

One thought on “ಬೂತ್ ಮಟ್ಟದಿಂದ ಜೆಡಿಎಸ್ ಪಕ್ಷವನ್ನ ಬಲಪಡಿಸಲು ಸಿದ್ಧತೆ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

Leave a Reply

Your email address will not be published. Required fields are marked *