ತಾಲೂಕಿನ ಬೆವಿಕಂ ವತಿಯಿಂದ ಡಿ.22ರಂದು 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯುತ್ ಬಗ್ಗೆ ಜಾಗೃತಿ, ಬಳಕೆ, ಅವಘಡ ತಡೆ, ಸುರಕ್ಷತೆ ಬಗ್ಗೆ ಭಾಷಣ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಷಣ ಸ್ಪರ್ಧೆಯನ್ನು ನಗರದ ವಿದ್ಯಾನಗರದಲ್ಲಿರುವ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಬೆಳಗ್ಗೆ 10:30ಕ್ಕೆ ಆಯೋಜಿಸಲಾಗಿರುತ್ತದೆ.
ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ 3 ಬಹುಮಾನಗಳನ್ನು ನೀಡಲಾಗುವುದು:
1. ಪ್ರಥಮ ಬಹುಮಾನದ ಮೊತ್ತ-2000/-ರೂ.
2. ಎರಡನೇ ಬಹುಮಾನ ಮೊತ್ತ-1000/-ರೂ.
3. ಮೂರನೇ ಬಹುಮಾನ ಮೊತ್ತ-750/-ರೂ. ನೀಡಲಾಗುತ್ತದೆ.
ಈ ಸ್ಪರ್ಧೆಯಲ್ಲಿ ತಾಲೂಕಿನ ಎಲ್ಲಾ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.