ಎಕ್ಸ್ ಎಲ್ ಹಾಗೂ ಆಕ್ಟೀವ್ ಹೋಂಡಾ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ 6:45ರ ಸಮಯದಲ್ಲಿ ತಾಲೂಕಿನ ಕಂಟನಕುಂಟೆ ಹಾಗೂ ವಡ್ಡರಹಳ್ಳಿ ಮಾರ್ಗ ಮಧ್ಯೆ ನಡೆದಿದೆ.
ಡಿಕ್ಕಿ ರಭಸಕ್ಕೆ ಬೈಕ್ ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿವೆ. ಎಕ್ಸ್ ಎಲ್ ಸವಾರ ಮೇಲಿನಜೂಗಾನಹಳ್ಳಿಯ ಅಮೂಲ್ ನಾರಾಯಣಪ್ಪ ಆಕ್ಟೀವ್ ಹೋಂಡಾ ಸವಾರ ಎಸ್.ನಾಗೇನಹಳ್ಳಿ ನಿವಾಸಿ ಉದಯ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.