ಸೂರ್ಯ ಕುಮಾರ್ – ಕುಲದೀಪ್ ಮಿಂಚಿಂಗ್, ಸೌತ್ ಆಫ್ರಿಕಾ ವಿರುದ್ಧ ಟಿ-ಟ್ವೆಂಟಿ ಸರಣಿ ಸಮಬಲಗೊಳಿಸಿದ ಭಾರತ !

ಸೂರ್ಯ ಕುಮಾರ್ ಯಾದವ್ ಅವರ ಆಕರ್ಷಕ ಶತಕ ಹಾಗೂ ಕುಲದೀಪ್ ಯಾದವ್ ಅವರ ಮಿಂಚಿನ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಟಿ -ಟ್ವೆಂಟಿ ಸರಣಿಯನ್ನು ಸಮಬಲಗೊಳಿಸಿತು.

ಮೊದಲ ಪಂದ್ಯ ಮಳೆಗೆ ಆಹುತಿಯಾದರೂ ಸಹ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಗೆಲ್ಲುವ ಮೂಲಕ ಭಾರತಕ್ಕೆ ಸಂಕಷ್ಟಕ್ಕೆ ದೂಡಿತ್ತು, ಆದರೆ ಮೂರನೇ ಪಂದ್ಯವನ್ನು ಭಾರತ 106 ರನ್ ಗಳಿಂದ ಗೆದ್ದು ಬೀಗಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ (8) ನಿರಾಸೆ ಮೂಡಿಸಿದರು, ಆದರೆ ಯಶಸ್ವಿ ಜೈಸ್ವಾಲ್ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು.

 

ನಂತರ ಬಂದ ತಿಲಕ್ ವಮಾ೯(೦) ಹೆಚ್ಚು ಹೊತ್ತು ನಿಲ್ಲದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು, ಆದರೆ ನಾಯಕ ಸೂರ್ಯ ಕುಮಾರ್ ಯಾದವ್ ಏಳು ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ (100) ಶತಕ ಸಿಡಿಸಿ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು.

ಬೃಹತ್ ಮೊತ್ತ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲಿಂಗ್ ಪಡೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ, ನಾಯಕ ಮಾಕ್ರಮ್ (25) ಹಾಗೂ ಮಿಲ್ಲರ್ (35) ಹೊರತುಪಡಿಸಿ ಉಳಿದ ಬ್ಯಾಟ್ಸ್ಮನಗಳು ರನ್ ಗಳಿಸಲು ಪರದಾಡಿದರು.

ಭಾರತದ ಪರವಾಗಿ ಸ್ಪಿನ್ನರ್ ಕುಲದೀಪ್ ಯಾದವ್ (5) ವಿಕೆಟ್ ಗೊಂಚಲು ಪಡೆದು ಮಿಂಚಿದರೆ, ಆಲ್ ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟ್ ಹಾಗೂ ವೇಗಿಗಳಾದ ಮುಖೇಶ್ ಕುಮಾರ್ ಮತ್ತು ಅಶ೯ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು, ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಸೂರ್ಯ ಕುಮಾರ್ ಯಾದವ್ ಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *