ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರ ಮುಂದೆ ಸಾಧಿಸಲು ಅಪಾರ ಅವಕಾಶಗಳ ಬಾಗಿಲುಗಳ ತೆರೆದು ನಿಂತಿವೆ. ಆದರೆ ಅವಳು ಎರಡು ಹೆಜ್ಜೆ ಮುಂದೆ ಇಟ್ಟರೆ ನಾಲ್ಕು ಹೆಜ್ಜೆ ಕೆಳಕ್ಕೆಳೆಯಲು ಅನೇಕ ದುಷ್ಟ ಶಕ್ತಿಗಳು ಕಾದು ನಿಂತಿವೆ ಎಂದು ಉಪನ್ಯಾಸಕಿ ಕೆ.ಎನ್.ರಶ್ಮಿ ಹೇಳಿದರು.
ನಗರದ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿಂದು ಮಹಿಳಾ ಘಟಕದ ವತಿಯಿಂದ ಮಹಿಳಾ ವಿದ್ಯಾರ್ಥಿಗಳಿಗೆ.. ಆಧುನಿಕ ಜಗತ್ತಿನಲ್ಲಿ ಮಹಿಳೆಯರ ನೆಲೆ ಬೆಲೆ ಕುರಿತ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ ಎಂದರು.
ಸರಾಸರಿ ಫೋನ್ ಬಳಕೆಯ ವಿಷಯದಲ್ಲಿ, ಮಹಿಳೆಯರು ತಮ್ಮ ಫೋನ್ ಅನ್ನು ಪುರುಷರಿಗಿಂತ ಹೆಚ್ಚು ಸಮಯವನ್ನು ಬಳಸುತ್ತಾರೆ. 20ರ ಹರೆಯದ ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಪುರುಷ ಗೆಳೆಯರಿಗಿಂತ ಗಮನಾರ್ಹವಾಗಿ ಹೆಚ್ಚು ವೇಳೆ ಬಳಸುತ್ತಿರುವುದು ವರದಿಗಳಿಂದ ತಿಳಿದು ಬಂದಿದೆ. ದಯಮಾಡಿ ಮೊಬೈಲ್ ಗೀಳಿಗೆ ಬೀಳದೆ ತಮ್ಮ ಮಾನಸಿಕವಾಗಿ ಆರೋಗ್ಯಯುತವಾಗಿ ಇರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ವೇಳೆ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.