ಏಕಾಎಕಿ ಜಮೀನಿಗೆ ನುಗ್ಗಿದ ಪುಂಡರ ಗ್ಯಾಂಗ್, ತಂತಿ ಬೇಲಿ ಕೆಡವಿ ಜಮೀನು ಅತಿಕ್ರಮ ಪ್ರವೇಶ ಮಾಡಿದ್ದಾರೆ, ಸ್ಥಳಕ್ಕೆ ಅಧಿಕಾರಿಗಳ ಕರೆಯದೆ, ತೆರವು ಕಾರ್ಯಾಚರಣೆಯ ನಡೆಸಿದ್ದಾರೆಂಬ ಆರೋಪವನ್ನ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಮಾಡಲಾಗಿತ್ತು. ಆದರೆ ಆರೋಪವನ್ನ ನಿರಕರಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸುಳ್ಳು ಆರೋಪ ಮಾಡುತ್ತಿರುವುದ್ದಾಗಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಟಿ.ಹೊಸಹಳ್ಳಿ ನಿವಾಸಿ ಆಂಜಿನಪ್ಪನವರ 2 ಎಕರೆ 12 ಗುಂಟೆ ಕಬಳಿಸುವ ಸಂಚನ್ನ ಭೂಗಳ್ಳರು ನಡೆಸಿದ್ದಾರೆ, ಆಂಜಿನಪ್ಪನವರ ತಂದೆ ರಾಮಯ್ಯನವರಿಗೆ ಕಾರಾನಾಳ ಸರ್ವೆ ನಂಬರ್ 168 ರಲ್ಲಿ ಸರ್ಕಾರದಿಂದ 2 ಎಕರೆ 12 ಗುಂಟೆ ಜಮೀನು ಮಂಜೂರಾಗಿತ್ತು.
ತಂದೆಯ ನಿಧನ ನಂತರ ಈ ಜಮೀನು ಆಂಜಿನಪ್ಪನವರಿಗೆ ಪೌವತಿ ಖಾತೆ ಆಗಿದೆ, ಇವರ ಜಮೀನು ಪಕ್ಕದಲ್ಲಿ ಸರ್ವೇ ನಂಬರ್ 169 ರಲ್ಲಿ ಗುಣ ಶೇಖರ್ ರವರಿಗೆ ಸೇರಿದ 1 ಎಕರೆ 6 ಗುಂಟೆ ಜಮೀನು ಇದ್ದು, ಜಮೀನಿನ ಉಳಿದ ಭಾಗ ಆಂಜಿನಪ್ಪ ಜಮೀನಿನಲ್ಲಿದೆ ಎಂದು ಸುಳ್ಳು ಆರೋಪ ಮಾಡುವ ರಿಯಲ್ ಎಸ್ಟೇಟ್ ಉದ್ಯಮಿ ಉದ್ಯಮಿಯೊಬ್ಬ ಮಧ್ಯ ಪ್ರವೇಶ ಮಾಡಿ ಕಿರುಕುಳ ಕೊಡುತ್ತಿದ್ದಾರೆ, ಜಮೀನು ಒತ್ತುವರಿ ತೆರವು ಮಾಡಬೇಕಾದರೆ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳು ಇರಬೇಕು, ಪೊಲೀಸ್ ಬಂದೋಬಸ್ತ್ ಇರಬೇಕು ಮತ್ತು ಜಮೀನು ಒತ್ತುವರಿ ತೆರವು ಮಾಡುವ ಬಗ್ಗೆ ರೈತನಿಗೆ ನೋಟಿಸ್ ನೀಡಬೇಕು, ಆದರೆ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿದ ರಿಯಲ್ ಎಸ್ಟೇಟ್ ಉದ್ಯಮಿ ತಂಡ ಏಕಾಏಕಿ ಬಂದು ತಂತಿ ಬೇಲಿ ಕೆಡವಿ ಜಮೀನು ಕಬಳಿಸುವ ಸಂಚು ನಡೆಸಿದ್ದಾರೆ ಎಂದು ಆಂಜಿನಪ್ಪ ಕುಟುಂಬ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಮಧು ಮತ್ತು ಆಂಜಿನಪ್ಪ ಮಾಡುತ್ತಿರುವ ಆರೋಪವನ್ನ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮುನೇಗೌಡ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ, 2015ರಲ್ಲೇ ನಾನು ಸರ್ವೆ ನಂಬರ್ 169ರ ಒಂದು ಎಕರೆ ಜಮೀನನ್ನು ಯಶೋಧಮ್ಮನವರಿಗೆ ಮಾರಿದ್ದೇನೆ, ಗುಂಡಾಗಳನ್ನು ಬಿಟ್ಟು ಒತ್ತುವರಿ ತೆರವು ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ, ಅಕ್ಕನ ಗಂಡನೇ ಆಗಬೇಕಿದ್ದ ಆಂಜಿನಪ್ಪ, ಅಕ್ಕನ ಮಗಳ ಮದುವೆಗಾಗಿ 10 ಲಕ್ಷ ಮಗನ ಮದುವೆ 5 ಲಕ್ಷ ಹಣ ಕೊಟ್ಟಿದೆ. ಹಣ ವಾಪಸ್ ಕೇಳಿದಕ್ಕೆ ವಿನಾ ಕಾರಣ ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ, ಮುಂದೆಯೂ ಇದೇ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಆಂಜಿನಪ್ಪ ಮತ್ತು ಆತನ ಮಗನ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವ ಎಚ್ಚರಿಕೆಯನ್ನ ನೀಡಿದ್ದಾರೆ.