ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶದನ್ವಯ ವಿದ್ಯುತ್ ಬಳಕೆ ಮಾಡುವ ಮುನ್ನಾ ಗ್ರಾಹಕರು ಏನೆಲ್ಲಾ ಸುರಕ್ಷತಾ ಕ್ರಮಗಳನ್ನ ಅನುಸರಿಸಬೇಕು ಎಂಬುದನ್ನ ಗ್ರಾಹಕರಿಗೆ ಅರಿವು ಮೂಡಿಸಲು ಡಿ.4ರಂದು ನಗರದಲ್ಲಿ ಸುರಕ್ಷತಾ ಜಾಥಾವನ್ನ ಹಮ್ಮಿಕೊಳ್ಳಲಾಗಿದೆ.
ಡಿ.4 ಸೋಮವಾರ ಬೆಳಗ್ಗೆ 10ಗಂಟೆಗೆ ಸರಿಯಾಗಿ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ಕಚೇರಿಯಿಂದ ಡಿ ಕ್ರಾಸ್ ಮಾರ್ಗವಾಗಿ ಬೆಸ್ಕಾಂ ನಗರ ಉಪ ವಿಭಾಗ ಕಚೆರಿಯವರೆಗೆ ಗ್ರಾಹಕರ ಸುರಕ್ಷತಾ ಜಾಥಾ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಬೆಸ್ಕಾಂ ನಗರ ಹಾಗೂ ಗ್ರಾಮೀಣ ಉಪ ವಿಭಾಗದ ಎಲ್ಲಾ ಶಾಖಾಧಿಕಾರಿಗಳು, ಕಂದಾಯ ಶಾಖೆಯ ಸಿಬ್ಬಂದಿ, ಹಾಗೂ ಎಲ್ಲಾ ಪವರ್ ಮೆನ್ ಗಳು, ಗ್ಯಾಂಗ್ ಮೆನ್ ಗಳು ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು, ಪವರ್ ಮೆನ್ ಗಳು ಕಡ್ಡಾಯವಾಗಿ ಸಮವಸ್ತ್ರ ಮತ್ತು ಹೆಲ್ಮೆಟ್ ಗಳನ್ನು ಧರಿಸಿ ಹಾಜರಾಗಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.