ಡಾಬಾ ಬಳಿ ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಫೋಟೋ ಶೂಟ್ ವಿಚಾರಕ್ಕೆ ಜಗಳವಾಗಿ, ಕುಡಿದ ಅಮಲಿನಲ್ಲಿ ಯವಕನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯ ನಿವಾಸಿ ಸೂರ್ಯ(ಸೂರಿ) ಕೊಲೆಯಾಗಿದ್ದ ಯುವಕ. ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಮತ್ತು ಕೊಡಿಗೇಹಳ್ಳಿಯವರಾದ ದಿಲೀಪ್, ಅವಿನಾಶ್, ಕಿರಣ್ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿಯ ಬಂಧನಕ್ಕೂ ದೊಡ್ಡಬೆಳವಂಗಲ ಪೊಲೀಸರು ಬಲೆ ಬೀಸಿದ್ದಾರೆ.

ನ.12ರ ಭಾನುವಾರ ಸಂಜೆ ತಾಲೂಕಿನ ರಾಮೇಶ್ವರ ಗೇಟ್ ಸಮೀಪವಿರುವ ಖಾಸಗಿ ಡಾಬಾವೊಂದರಲ್ಲಿ ಯುವಕರು ಫೋಟೋ‌ ಶೂಟ್ ಮಾಡಿಕೊಳ್ಳುತ್ತಿರವಾಗ ಕಿಡಿಗೇಡಿಗಳ ಗುಂಪೊಂದು ಸ್ಥಳಕ್ಕೆ ಬಂದು ಬೇಕಂತಲೇ ಕಿರಿಕ್ ಮಾಡಿ ಸೂರ್ಯ(ಸೂರಿ) ಎಂಬ ಯುವಕನಿಗೆ ಥಳಿಸಿ, ಕೈಯಲ್ಲಿದ್ದ ಮೊನಚಾದ ವಸ್ತುವಿನಿಂದ ಹೃದಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿತ್ತು. ಇರಿತದ ರಭಸಕ್ಕೆ ಸುಮಾರು ಒಂದೂವರೆ ಇಂಚು ಯುವಕ‌ನ ಹೃದಯದೊಳಗೆ ಹೊಕ್ಕಿದೆ ಎನ್ನಲಾಗಿತ್ತು.

Leave a Reply

Your email address will not be published. Required fields are marked *