ನವೆಂಬರ್ 27ರಿಂದ ಜಿಲ್ಲಾಮಟ್ಟದ ಯುವಜನೋತ್ಸವ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವೆಂಬರ್ 27 ರಂದು ಜಗಜೀವನ ರಾಮ್ ಭವನ, ಡಿ ಕ್ರಾಸ್ ರಸ್ತೆ ದೊಡ್ಡಬಳ್ಳಾಪುರ ಇಲ್ಲಿ ನಡೆಸಲಾಗುತ್ತಿದೆ.

ಸ್ಪರ್ಧೆಗಳ ವಿವರ

ಗುಂಪು ಸ್ಪರ್ಧೆಗಳು

01.ಜಾನಪದ ನೃತ್ಯ (ತಂಡ) – ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ, ಭಾಗವಹಿಸುವವರ ಸಂಖ್ಯೆ 10 ಜನ, ಸಮಯ 15 ನಿಮಿಷ.

2.ಜಾನಪದಗೀತೆ (ತಂಡ) – ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ, ಭಾಗವಹಿಸುವವರ ಸಂಖ್ಯೆ 10 ಜನ, ಸಮಯ 07 ನಿಮಿಷ.

ವೈಯಕ್ತಿಕ ಸ್ಪರ್ಧೆಗಳು

3.ಜಾನಪದ ನೃತ್ಯ – ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ ಭಾಗವಹಿಸುವವರ ಸಂಖ್ಯೆ 01 ( ಒಬ್ಬರು ), ಸಮಯ 07 ನಿಮಿಷ.

4.ಜಾನಪದ ಗೀತೆ – ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ ಭಾಗವಹಿಸುವವರ ಸಂಖ್ಯೆ 01 ( ಒಬ್ಬರು ), ಸಮಯ 07 ನಿಮಿಷ.

5.ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್ (1000 ಪದಗಳು ಮೀರದಂತೆ) – ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ವಿಷಯವು ಆಕ್ರಮಣಕಾರಿಯಾಗಿರಬಾರದು ಈಗಾಗಲೇ ಪ್ರಕಟವಾಗಿರಬಾರದು, ಸ್ಪಷ್ಟವಾಗಿರಬೇಕು ಜಾತಿ / ಪಂಥ / ಧರ್ಮ / ವರ್ಣ / ಜನಾಂಗವನ್ನು ಒಳಗೊಂಡಿರಬಾರದು. ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು ಭಾಗವಹಿಸುವವರ ಸಂಖ್ಯೆ 01 ( ಒಬ್ಬರು ), ಸಮಯ 60 ನಿಮಿಷ.

6.ಪೋಸ್ಟರ್ ಮೇಕಿಂಗ್ (ಭಿತ್ತಿ ಪತ್ರ ತಯಾರಿಕೆ) (ವೈಯಕ್ತಿಕ) ಪೋಸ್ಟರ್ A3 Size  11.7 *16.5″ – ಕನ್ನಡ/ ಆಂಗ್ಲ ಹಿಂದಿ ಭಾಷೆಯಲ್ಲಿ ಭಿತ್ತಿಪತ್ರವು ಯಾವುದೇ ಸಂಸ್ಥೆಯನ್ನು ಅಥವಾ ಬ್ರಾಂಡ್ ಹೆಸರು ಪ್ರತಿನಿಧಿಸುತ್ತಿರಬಾರದು. ಸ್ಪರ್ಧಿಗಳು ತಾವು ಸಲ್ಲಿಸುವ ಭಿತ್ತಿಪತ್ರವು 20-30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು ಭಾಗವಹಿಸುವವರ ಸಂಖ್ಯೆ 01 ( ಒಬ್ಬರು ), ಸಮಯ 90 ನಿಮಿಷ.

7.Declamation (ಘೋಷಣೆ)ಭಾಷೆ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು (ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು) ಕನ್ನಡ ಭಾಷೆಯನ್ನು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಮಾತ್ರ ಸೀಮಿತಗೊಳಿಸಿದೆ. ಸ್ಪರ್ಧಿಗಳು ಸಿದ್ಧಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ ಭಾಷಣ ಮಾಡಬೇಕು.

ತೀರ್ಮಾನ: ಭಾಷಣದ ನಿಖರತೆ, ಹರಿವು, ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸುವ ಅಂಕಗಳು, ಶಬ್ದ/ಪದಗಳು ಪುನರಾವರ್ತನೆ ಆಗದಿರುವುದು ವಿಷಯದ ಬಗ್ಗೆ ಅರಿವು ಮತ್ತು ಆತ್ಮ ವಿಶ್ವಾಸ ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ. ಭಾಗವಹಿಸುವವರ ಸಂಖ್ಯೆ 01‌ ( ಒಬ್ಬರು ), ಸಮಯ 03 ನಿಮಿಷ.

8.ಛಾಯಾಚಿತ್ರಣ (ವೈಯಕ್ತಿಕ) ಕೆಳಗಿನ ವಿಷಯಗಳನ್ನು ಒಂದನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು ಮೊಬೈಲ್ ನಿಂದ ತೆಗೆದ ಚಿತ್ರಗಳನ್ನು ಸಹ ಪರಿಗಣಿಸಬಹುದಾಗಿದೆ.

ಪ್ರಗತಿಶೀಲ ಭಾರತ, ಆತ್ಮನಿರ್ಭರ ಭಾರತ, ಯೋಗ/ಕ್ರೀಡೆ, ಫಿಟ್ನೆಸ್‌ಗಾಗಿ ದೈಹಿಕ ಚಟುವಟಿಕೆ ಪ್ರಕೃತಿ ದೃಶ್ಯಗಳು ಸ್ಪರ್ಧಿಗಳು ತಾವು ಸಲ್ಲಿಸುವ ಭಿತ್ತಿಪತ್ರವು 20-30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು ಭಾಗವಹಿಸುವವರ ಸಂಖ್ಯೆ 01 ( ಒಬ್ಬರು) ಸ್ಪರ್ಧಾತ್ಮಕವಲ್ಲದ ವಿಭಾಗ.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕವಲ್ಲದ ವಿಭಾಗಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯೋಜನೆ ಮಾಡುವುದು ಮತ್ತು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸುವುದು. ರಾಜ್ಯ ಮಟ್ಟದಲ್ಲಿ ವಿಜೇತ ವಿಭಾಗದವರು ಕೆಳಕಾಣಿಸಿದ ಥೀಮ್ ಗಳನ್ನು  ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧಾತ್ಮಕವಲ್ಲದ ವಿಭಾಗಕ್ಕೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಕೂಡಲೇ ಒದಗಿಸಲಾಗುವುದು.

1.ಗುಡಿ ಕೈಗಾರಿಕೆಯ ಕಲಾ ಪ್ರಕಾರ  – 07 ಜನ 2.ನೇಕಾರಿಕೆ / ಜವಳಿ – 07 ಜನ ಕೃಷಿ ಉತ್ಪನ್ನಗಳು – 07 ಜನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರನ್ನು ಮಾತ್ರ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ಪರಿಗಣಿಸತಕ್ಕದ್ದು ಮತ್ತು ಈ ಕಾರ್ಯಕ್ರಮವನ್ನು ಮೊದಲಿಗೆ ಜಿಲ್ಲಾ ಮಟ್ಟದಲ್ಲಿ ಮುಕ್ತವಾಗಿ ಯುವಜನರು ಭಾಗವಹಿಸಲು ವೇದಿಕೆಯಾಗಿದ್ದು, ಇಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕ  ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರತಿನಿಧಿಸಲಿದ್ದಾರೆ.

 ಸೂಚನೆಗಳು

ಭಾಗವಹಿಸುವ ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನವರಾಗಿರಬೇಕು. ಭಾಗವಹಿಸುವ ಅಭ್ಯರ್ಥಿಗಳು 15 ರಿಂದ 29ರ ವಯೋಮಿತಿಯ ಯುವಕ, ಯುವತಿಯರು ಮತ್ತು ಕಲಾ ತಂಡಗಳು ಭಾಗವಹಿಸಬಹುದಾಗಿರುತ್ತದೆ.

ಸ್ಪರ್ಧೆಗೆ ಅವಶ್ಯವಿರುವ ವಸ್ತುಗಳನ್ನು / ಸಮವಸ್ತ್ರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. ಇಲಾಖೆಯಿಂದ ಯಾವುದೇ ಪರಿಕರಗಳ ವ್ಯವಸ್ಥೆ ಮಾಡಲಾಗುವುದಿಲ್ಲ. ಭಾಗವಹಿಸುವವರು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಆಯ್ಕೆ ಪ್ರಕ್ರಿಯೆ ಸ್ಥಳದಲ್ಲಿ ಸಲ್ಲಿಸುವುದು.

ಯುವಜನೋತ್ಸವ ಸ್ಪರ್ಧೆಯಲ್ಲಿ ಜಿಲ್ಲೆಯ ಸ್ಪರ್ಧಾಳುಗಳು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಥವಾ ಬೇರೆ ಜಿಲ್ಲೆಯಿಂದ ಈ ಜಿಲ್ಲೆಯಲ್ಲಿ ಭಾಗವಹಿಸುವಂತಿಲ್ಲ. ಕಡ್ಡಾಯವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲಾಖೆಯು ನೀಡುವ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡುವುದು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ರಾಜ್ಯ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಸಾಮಾನ್ಯ ಬಸ್ ದರದ ಪ್ರಯಾಣಭತ್ಯೆ ನೀಡಲಾಗುವುದು. ಹಾಗಾಗಿ ಅರ್ಜಿ ನಮೂನೆಯಲ್ಲಿ ಬ್ಯಾಂಕ್‌ಖಾತೆಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಹಾಗೂ ಅರ್ಜಿ ನಮೂನೆಯೋದಿಗೆ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ ಲಗತ್ತಿಸುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವವರು ಶಿಸ್ತಿನಿಂದ ವರ್ತಿಸಬೇಕು. ಅಶಿಸ್ತಿನಿಂದ ವರ್ತಿಸುವುದು ಕಂಡುಬಂದಲ್ಲಿ ಅಂತಹವರನ್ನು ಆಯ್ಕೆಯಿಂದ ಅನರ್ಹಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ತಾಲ್ಲೂಕು ಕೇಂದ್ರದಿಂದ ಸಾಮಾನ್ಯ ಬಸ್ ಪ್ರಯಾಣದರವನ್ನು ನೀಡಲಾಗುತ್ತದೆ.  ಪ್ರಯಾಣಭತ್ಯೆ ಪಡೆಯಲು ಸ್ಪರ್ಧಾಳುಗಳು ಕಡ್ಡಾಯವಾಗಿ ಬಸ್ ಟಿಕೇಟ್ ಸಲ್ಲಿಸುವುದು. ಒಬ್ಬ ಸ್ಪರ್ಧಾಳು 2 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಒಂದು ಗುಂಪು ಮತ್ತು ಒಂದು ವೈಯಕ್ತಿಕ ಮಾತ್ರ.

ಹೆಚ್ಚಿನ ವಿವರಗಳಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 080-29787443 ಅಥವಾ 9980590960 / 9632778567 ನಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *