ವಿಕಲಚೇತನರ 08 ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು (ಡಿ.ಬಿ.ಟಿ-ನೇರ ನಗದು ವರ್ಗಾವಣೆ) ತಂತ್ರಾಂಶದಡಿ ಅನುಷ್ಠಾನಗೊಳಿಸಲಾಗಿರುತ್ತದೆ.

ಆಧಾರ ಯೋಜನೆ, ಮೆರಿಟ್‌ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ ಯೋಜನೆ, ಮರಣ ಪರಿಹಾರ ನಿಧಿ, ವೈದ್ಯಕೀಯ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಸಾಧನೆ ಯೋಜನೆ, ನಿರುದ್ಯೋಗ ಭತ್ಯೆ, ಶಿಶುಪಾಲನಾ ಭತ್ಯೆ. ಈ 08 ಯೋಜನೆಗಳನ್ನು ಸೇವಾ ಸಿಂಧು ಮೂಲಕ ಲೈವ್ ಮಾಡಲಾಗಿದೆ.

2023-24ನೇ ಸಾಲಿಗೆ 08 ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ (https://sevasindhu.karnataka.gov.in/Sevasindhu/Department Services) ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 15 ರವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದ್ದು, ಅರ್ಹ ವಿಕಲಚೇತನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಮಾಹಿತಿ ಸಲಹಾ ಕೇಂದ್ರದ ದೂ.ಸಂ 080-29787441 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

One thought on “ವಿಕಲಚೇತನರ 08 ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Leave a Reply

Your email address will not be published. Required fields are marked *