ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ:ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ ವಶ

ನ.16ರಂದು ಕೊಲಂಬದಿಂದ ಇಬ್ಬರು ಮಹಿಳೆಯರು‌ ಹಾಗೂ ಬ್ಯಾಂಕಾಕ್‌ನಿಂದ ಮೂವರು ಪುರುಷರು ಬೆಂಗಳೂರಿಗೆ ಶರ್ಟ್ ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನ ಪತ್ತೆ ಮಾಡಿರುವ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು.

ಬಂಧಿತರಿಂದ 58,39,806 ಲಕ್ಷ ಮೌಲ್ಯದ 966 ಗ್ರಾಂ ಚಿನ್ನದ ಸರಗಳ ಕಟ್ ಪೀಸ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಅದೇರೀತಿ ನ.17ರಂದು ಮಸ್ಕತ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಏರ್ ಕಸ್ಟಮ್ಸ್‌ನ ಅಧಿಕಾರಿಗಳು ತಡೆಹಿಡಿದು ತಪಾಸಣೆ ನಡೆಸಿದಾಗ 68,18,812 ಮೌಲ್ಯದ 1113.07ಗ್ರಾಂ ಚಿನ್ನ ಪತ್ತೆಯಾಗಿದೆ.

ಪ್ರಯಾಣಿಕ ಸೊಂಟದ ಬೆಲ್ಟ್ ಪೌಚ್‌ನಲ್ಲಿ ಚಿನ್ನವನ್ನು ಮರೆಮಾಚಿ ಕಳ್ಳಸಾಗಣೆ ಮಾಡುತ್ತಿರುವುದನ್ನ ಪತ್ತೆ ಮಾಡಲಾಗಿದೆ.

ಸದ್ಯ ಬಂಧಿತರನ್ನ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *