ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಶತಕ ಹಾಗೂ ಮೊಹಮದ್ ಶಮಿ ಅವರ ಮಾರಕ ಬೌಲಿಂಗ್ ಪ್ರದರ್ಶನದಿಂದ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ ಹಾಗೂ 2019 ರ ಸೆಮಿಫೈನಲ್ ಪಂದ್ಯದ ಸೇಡು ತೀರಿಸಿಕೊಂಡಿತು.
ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡರು, ನಾಯಕ ರೋಹಿತ್ ಶರ್ಮಾ (47) ಹಾಗೂ ಶುಭಮನ್ ಗಿಲ್ (80)* ಉತ್ತಮ ಆರಂಭ ಒದಗಿಸಿದರು, ಮೊದಲ ವಿಕೆಟ್ ನಷ್ಟಕ್ಕೆ 71 ರನ್ ಕಲೆಹಾಕಿದ್ದಗ ಸೌಥಿ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸ್ ನ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
ನಂತರ ಒಂದಾದ ಅನುಭವಿ ಆಟಗಾರ ವಿರಾಟ್ ಕೋಹ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ (117) ರನ್ ಗಳಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ (49) ದಾಖಲೆ ಸರಿಗಟ್ಟಿದರು ಹಾಗೂ (50) ಶತಕ ಸಿಡಿಸಿ ಸಂಭ್ರಮಿಸಿದರು.
ನೆದರ್ಲೆಂಡ್ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶತಕ ಸಿಡಿಸಿದ್ದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ವಾಂಖೆಡೆ ಮೈದಾನದಲ್ಲಿ ನಾಲ್ಕು ಬೌಂಡರಿ ಹಾಗೂ ಎಂಟು ಸಿಕ್ಸರ್ ಸಿಡಿಸಿ ಬಿರುಸಿನ (105) ರನ್ ಗಳಿಸಿದರು.
ಕೊಹ್ಲಿ ಔಟಾದ ನಂತರ ಕ್ರಿಸ್ ಗೆ ಬಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ (39) ರನ್ ಗಳಿಸಿ ತಂಡದ ಮೊತ್ತವನ್ನು 400 ರ ಗಡಿ ದಾಟಿಸಿದರು.
ಗುರಿ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಆಟಗಾರರಾದ ಕಾನ್ವೆ(13) ಹಾಗೂ ರಚಿನ್ ರವೀಂದ್ರ (13) ಅವರನ್ನು ಮೊಹಮ್ಮದ್ ಶಮಿ ಪೆವಿಲಿಯನ್ ಗೆ ಕಳಿಸಿದರು, ಆದರೆ ನಂತರ ಬಂದ ನಾಯಕ ಕೆನ್ ವಿಲಿಯಮ್ಸ್ ನ್ (69) ಹಾಗೂ ಮಿಚೆಲ್ (134) ಒಂದು ಹಂತದಲ್ಲಿ ಗೆಲುವಿನ ಕಡೆ ಮುಖ ಮಾಡಿದ್ದರು ಆದರೆ ಶಮಿ ಅದಕ್ಕೆ ಅವಕಾಶ ನೀಡಲಿಲ್ಲ.
ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರಾದ ಲಾಥಮ್ (0), ಫಿಲಿಪ್ಸ್ (41), ಚಾಂಪನ್ (2), ಸ್ಯಾಂಟ್ನರ್ (9) ರನ್ ಗಳಿಸಿದರು, ಭಾರತದ ಪರವಾಗಿ ವೇಗಿ ಮೊಹಮ್ಮದ್ ಶಮಿ 7 ವಿಕೆಟ್ ಪಡೆದು ಮಿಂಚಿದರೆ ಸಿರಾಜ್, ಬುಮ್ರಾ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು, ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.