ಮೈಗೆ ಎಣ್ಣೆ ಬಳಿದುಕೊಂಡು ಬರಿ ಮೈಯಲ್ಲಿ ಕಳ್ಳತನಕ್ಕೆ ಬಂದಿದ್ದ ನಾಲ್ಕು ಮಂದಿ ಖದೀಮರು, ಯಾರು ಇಲ್ಲದ ಮನೆಗೆ ನುಗ್ಗಿ ಮನೆಯಲ್ಲಿದ್ದ 95 ಗ್ರಾಂ ಚಿನ್ನ, 1.50 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.
ರಾಯದುರ್ಗ ಮೂಲದ ಹನುಮಂತರೆಡ್ಡಿ ಎಂಬುವವರ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಕಳ್ಳತನದ ಸಮಯದಲ್ಲಿ ಆಕಸ್ಮಿಕವಾಗಿ ಸಿಕ್ಕಿಬಿದ್ದರೆ ಯಾರೂ ಹಿಡಿಯಬಾರದು ಎಂದು ಮೈಗೆ ಎಣ್ಣೆ ಬಳಿದುಕೊಂಡು ಬರೀ ಮೈ ನಲ್ಲಿ ಬಂದು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿ, ಚಿನ್ನ, ನಗದು ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ಬರಿ ಮೈಯಲ್ಲಿ ಬರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.