Categories: ವೈರಲ್

93 ವರ್ಷದ ವೃದ್ಧ ಪತ್ನಿಗೆ ಮಂಗಳಸೂತ್ರ ಕೊಡಿಸಲು ಚಿನ್ನದಂಗಡಿಗೆ ಚಿಲ್ಲರೆ ಕಾಸು ತಂದ ವಿಡಿಯೋ ವೈರಲ್‌: ಅಂಗಡಿ ಮಾಲೀಕ ಏನು ಮಾಡಿದ…?

93 ವರ್ಷದ ವೃದ್ಧನೊಬ್ಬ ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಚಿನ್ನದಂಗಡಿಗೆ ಚಿಲ್ಲರೆ ಕಾಸು ತಂದ ವಿಡಿಯೋ ಒಂದು ವೈರಲ್‌ ಆಗಿದೆ. ಇವರ ಕರುಣಾಜನಕ ಪ್ರೀತಿಗೆ ಮನಸೋತ ಅಂಗಡಿಯಾತ ಕೇವಲ 20 ರೂ. ಪಡೆದು ಮಂಗಳಸೂತ್ರ ಕೊಟ್ಟು ಕಳಿಸಿದ್ದಾನೆ.

ಅಂಗಡಿಯಾತನ ಹೃದಯ ವೈಶಾಲ್ಯತೆಗೆ ಕರಗಿಹೋದ ವೃದ್ಧ, ದಂಪತಿ ಕಣ್ಣೀರು ಹಾಕಿದ್ದಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದರು, ಅವರ ಪೈಕಿ ಒಬ್ಬ ಮೃತಪಟ್ಟಿದ್ದು , ಮತ್ತೊಬ್ಬ ಕುಡಿತದ ದಾಸನಾಗಿದ್ದಾನೆ ಎಂದು ದಂಪತಿ ಹೇಳಿಕೊಂಡಿದ್ದಾರೆ.

ಸದ್ಯದ ಚಿನ್ನದ ಬೆಲೆಯ ಅರಿವಿಲ್ಲದೆ ಅಂಗಡಿ ಬಾಗಿಲು ಹತ್ತಿದ ಈ ದಂಪತಿ ತಮ್ಮ ಕೈಚೀಲದಿಂದ 1200 ರೂ. ತೆಗೆದಿದ್ದಾರೆ. ಇಷ್ಟು ಹಣ ಸಾಲದು ಎಂದು ಅಂಗಡಿಯಾತ ಹೇಳಿದಾಗ ವೃದ್ಧ ತನ್ನ ಜೇಬಿನಿಂದ ಚಿಲ್ಲರೆ ನಾಣ್ಯಗಳನ್ನು ಹೊರತೆಗೆದಿದ್ದಾನೆ. ಈ ದೃಶ್ಯ ಕಂಡು ಅಂಗಡಿಯಾತ ಕರಗಿ ನೀರಾಗಿದ್ದಾನೆ.

ಬಳಿಕ ಇಬ್ಬರ ಹಣವನ್ನೂ ಅವರಿಗೆ ವಾಪಸ್‌ ಕೊಟ್ಟು. ತಾಳಿಯನ್ನೂ ಕೊಟ್ಟು ನೀವು ಪಾಂಡುರಂಗ ರುಕ್ಮಿಣಿ ಇದ್ದಂತೆ.. ಕೇವಲ ಹತ್ತು ರೂಪಾಯಿ ಕೊಡಿ ಎಂದು ಹೇಳಿ ಆಶೀರ್ವಾದ ಪಡೆದು ಕಳಿಸಿದ್ದಾನೆ. ಅಂಗಡಿಯಾತನ ವರ್ತನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

10 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

20 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago