800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು

ಇಂದು ಹೊಸ ವರ್ಷ ಹಿನ್ನೆಲೆ 800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದು ಪುನೀತರಾದರು….

ತಿಮ್ಮರಾಯಸ್ವಾಮಿ ದೇವಾಲಯ ಹಿನ್ನೆಲೆ

ಈ ಹಿಂದೆ ತಿರುಪತಿಗೆ ಹೋಗಿ ದೇವರ ದರ್ಶನ ಪಡೆಯಲು ಕಷ್ಟವಾಗುತ್ತಿತ್ತು. ಆದ್ದರಿಂದ ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಋಷಿಗಳು ಆವತಿಯಲ್ಲಿ ತಿಮ್ಮರಾಯಸ್ವಾಮಿ ದೇವಾಲಯವನ್ನು ಕಟ್ಟುತ್ತಾರೆ ಎಂದು ದೇವಾಲಯ ಪ್ರಧಾನ ಅರ್ಚಕ ಶ್ರೀಧರ್ ಭಟ್ ಹೇಳಿದರು.

ದೇವಾಲಯ ಹಿಂಭಾಗ ಗವಿ ಇದೆ. ಅಲ್ಲಿ ಋಷಿಗಳು ತಪಸ್ಸು ಮಾಡುತ್ತಿದ್ದರು. ಈ ದೇವಸ್ಥಾನದಲ್ಲಿ ಭಕ್ತರು ಏನೇ ಹರಕೆ ಹೊತ್ತುಕೊಂಡರೆ ಅದು ನೆರವೇರುತ್ತದೆ ಎಂದರು.

ಮಾಘ ಮಾಸ, ವೈಕುಂಠ ಏಕಾದಶಿ, ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷವಾಗಿರುತ್ತದೆ. ಅಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ… ನಿತ್ಯ ಅನ್ನದಾನ ನಡೆಯುತ್ತದೆ ಎಂದು ತಿಳಿಸಿದರು…

ಆಂಧ್ರ, ತಮಿಳುನಾಡು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎಂದರು…

ಆವತಿ ಹೆಸರಿನ ಹಿನ್ನೆಲೆ

ನಾಡಪ್ರಭು ಕೆಂಪೇಗೌಡರು ಇಲ್ಲೇ ಹುಟ್ಟಿದ್ದು ಎಂದು ಹೇಳಲಾಗುತ್ತದೆ. ಕೆಂಪೇಗೌಡರ ತಂದೆ ತಾಯಿ ಇಲ್ಲಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದರಂತೆ.‌ ಆಗ ಕೆಂಪೇಗೌಡರು ಇನ್ನು ಚಿಕ್ಕ ಮಗು, ಹತ್ತಿ‌ ಮರಕ್ಕೆ ಜೋಳಿಗೆ ಕಟ್ಟಿ ಜೋಳಿಗೆಯಲ್ಲಿ ಮಲಗಿಸಿ ತೋಟದಲ್ಲಿ ಕೆಲಸ ಮಾಡುತ್ತಿದ್ದರಂತೆ. ಬೇಸಿಗೆ ಕಾಲದಲ್ಲಿ ಹತ್ತಿ ಮರದ‌ ಕೆಳಗಡೆ ಕೆಂಪೇಗೌಡರು ಜೋಳಿಗೆಯಲ್ಲಿ ಮಲಗಿರಬೇಕಾದರೆ ನೆರಳು ಕೊಡಲೆಂದು ಪ್ರತಿದಿನ ಹಾವು ಹತ್ತಿ ಮರ ಹತ್ತುತ್ತಿತ್ತಂತೆ. ಆಗ ಜನ ಇದನ್ನು ಕಂಡು ಹಾವು ಹತ್ತಿ… ಹಾವು ಹತ್ತಿ ಎಂದು ಹೇಳುತ್ತಾ ಹೇಳುತ್ತಾ ಇಂದು ಆವತಿ‌ಯಾಗಿದೆ ಎಂದು ಹೇಳಲಾಗುತ್ತದೆ ಎಂದು ದೇವಾಲಯ ಪ್ರಧಾನ ಅರ್ಚಕ ಶ್ರೀಧರ್ ಭಟ್ ಹೇಳಿದ್ದಾರೆ….

Leave a Reply

Your email address will not be published. Required fields are marked *

error: Content is protected !!