6 ಮತ್ತು 3 ವರ್ಷದ ಗಂಡು ಮಕ್ಕಳ(ಅಣ್ಣ-ತಮ್ಮ) ಮೇಲೆ ಮನಸೋ ಇಚ್ಛೆ ಹಲ್ಲೆ: ಸದ್ಯ ಮಕ್ಕಳ ರಕ್ಷಣೆ

3 ಮತ್ತು 6 ವರ್ಷದ ಗಂಡು ಮಕ್ಕಳ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಗಾಯಪಡಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನ ಸಮೀಪ ಜ.20ರಂದು ನಡೆದಿದೆ….

ಸದ್ಯ ಹಲ್ಲೆ ಮಾಡಿರುವವರು ಯಾರು ಎಂದು ತಿಳಿದುಬಂದಿರುವುದಿಲ್ಲ. ಮಕ್ಕಳ ಪೋಷಕರ ಹುಡುಕಾಟದಲ್ಲಿ ಪೊಲೀಸರು ಕಾರ್ಯನಿರತರಾಗಿದ್ದು, ಪೋಷಕರ ಪತ್ತೆಯಾದ ನಂತರ ಹಲ್ಲೆ ನಡೆಸಿದ ವ್ಯಕ್ತಿ ಯಾರು ಎಂಬುದು ತಿಳಿದುಬರಲಿದೆ…

ಎಳೆ ಮಕ್ಕಳ ಮೈ, ಕಾಲು, ಕೈ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಲಾಗಿದೆ… ಹಲ್ಲೆಯ ಪರಿಣಾಮ ಒಂದು ಮಗವಿಗೆ ಬಲಗೈ ಮುರಿತವಾಗಿದೆ ಎನ್ನಲಾಗಿದೆ…

ಅನಾಮಿಕನಿಂದ ಮಕ್ಕಳ ಮೇಲೆ ಹಲ್ಲೆ ಆಗಿದೆ ಎನ್ನಲಾಗಿದೆ. ಇದರಲ್ಲಿ ತಾಯಿ ಕೂಡ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ…

ಹಲ್ಲೆಯನ್ನು ತಾಳಲಾರದೇ ಮಕ್ಕಳ ಚಿರಾಟ ಮಾಡುತ್ತಿದ್ದಾಗ ಅಕ್ಕಪಕ್ಕದ ಮನೆಯವರು ಮಕ್ಕಳ ಸಹಾಯವಾಣಿ 1098 ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಮಕ್ಕಳ ಸಹಾಯವಾಣಿ ತಂಡ.   ಹಲ್ಲೆಗೆ ಒಳಗಾದ ಮಕ್ಕಳನ್ನು ರಕ್ಷಣೆ ಮಾಡಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ…

ಹಲ್ಲೆ ಬಗ್ಗೆ ಮಕ್ಕಳ ಬಳಿ ವಿಚಾರಿಸಿದಾಗ, ತಾಯಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಾರೆ. ನಾವು ತಂದೆ ಜೊತೆ ಇಲ್ಲ. ನಮ್ಮ ಮನೆಗೆ ಆಗಾಗ ಒಬ್ಬ ಅಂಕಲ್ ಬರುತ್ತಾರೆ.. ಅವರೇ ನಮಗೆ ಥಳಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ…

ಮಕ್ಕಳ ಮೇಲೆ ಹಲ್ಲೆ ಮಾಡಿದ ಕಿರಾತಕರನ್ನು ಪೊಲೀಸರು ಪತ್ತೆ ಹಚ್ಚಿ ತಕ್ಕ‌ ಶಿಕ್ಷೆ ನೀಡುತ್ತಾರಾ….? ಕಾದು ನೋಡಬೇಕಾಗಿದೆ…

ಸದ್ಯ ನಿಖರ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…

Leave a Reply

Your email address will not be published. Required fields are marked *

error: Content is protected !!