ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2026: ಅಂತಿಮ ಮತದಾರ ಪಟ್ಟಿಯಲ್ಲಿ 2863 ಶಿಕ್ಷಕ ಮತದಾರರು : ಡಿಸಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುವ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರ ಪಟ್ಟಿಯಲ್ಲಿ 2863 ಶಿಕ್ಷಕ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ಕೆ.ಎನ್ ಅನುರಾಧ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರ ಪಟ್ಟಿಯನ್ನು ಅಕ್ಟೋಬರ್ 06 ರಂದು ಪ್ರಕಟಿಸಲಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ(ದೊಡ್ಡಬೆಳವಂಗಲ,ಸಾಸಲು ಸೇರಿ) 811, ದೇವನಹಳ್ಳಿ ತಾಲ್ಲೂಕಿನಲ್ಲಿ 593, ಹೊಸಕೋಟೆ 814, ನೆಲಮಂಗಲ ತಾಲ್ಲೂಕಿನಲ್ಲಿ(ಸೋಂಪುರ, ತ್ಯಾಮಗೊಂಡ್ಲು ಸೇರಿ) 645 ಶಿಕ್ಷಕರ ಇದ್ದು, ಒಟ್ಟು 1411 ಪುರುಷ, 1452 ಮಹಿಳಾ ಶಿಕ್ಷಕರು ಸೇರಿ 2863 ಶಿಕ್ಷಕ ಮತದಾರರು ಅಂತಿಮ ಮತದಾರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ 6 ನಾಮಪತ್ರಗಳು ಸಲ್ಲಿಕೆಯಾಗಿದೆ. ಅಧಿಸೂಚನೆ ಅನ್ವಯ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ದಿನಾಂಕ: 23.10.2026 ರಂದು ಮತದಾನ, 27.10.2026 ರಂದು ಮತ ಎಣಿಕೆ ಜರಗಲಿದೆ. ಚುನಾವಣಾ ಪ್ರಕ್ರಿಯೆ ದಿನಾಂಕ 31.10.2026 ರಂದು ಕೊನೆಗೊಳ್ಳಲಿದೆ ಎಂದರು.

ಜಿಲ್ಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ಷೇತ್ರದಾದ್ಯಂತ ವಿವಿಧ ತಂಡಗಳನ್ನು ರಚಿಸಿದ್ದು, 24 ಗಂಟೆಗಳ ಕಾಲ ನಿರಂತರ ನಿಗಾ ಇಡಲಾಗುತ್ತಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ, ಎಂ.ಸಿ.ಸಿ ತಂಡ, ಎಂ.ಸಿ.ಎಂ.ಸಿ ಸಮಿತಿ, ಮೀಡಿಯಾ ವೀವಿಂಗ್ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

6 ಮತಗಟ್ಟೆ ಸ್ಥಾಪನೆ

ಅಕ್ಟೋಬರ್ 23ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಮತದಾನಕ್ಕಾಗಿ ಜಿಲ್ಲೆಯಲ್ಲಿ 6 ಸ್ಥಳಗಳಲ್ಲಿ ಮತಗಟ್ಟೆ (ಪೊಲಿಂಗ್ ಸ್ಟೇಷನ್) ಸ್ಥಾಪನೆ ಮಾಡಲಾಗಿದೆ.

1. ತಾಲ್ಲೂಕು ಆಡಳಿತ ಸೌಧ ದೊಡ್ಡಬಳ್ಳಾಪುರ ಟೌನ್.

2. ಕೊ.ಸಂ 02, ಕರ್ನಾಟಕ ಪಬ್ಲಿಕ್ ಶಾಲೆ, ದೊಡ್ಡಬೆಲವಂಗಲ.

3. ತಾಲ್ಲೂಕು ಆಡಳಿತ ಸೌಧ, ದೇವನಹಳ್ಳಿ ಟೌನ್.

4. ತಾಲ್ಲೂಕು ಕಾರ್ಯನಿರ್ವಾಹಕ ಕಚೇರಿ, ತಾಲ್ಲೂಕು ಪಂಚಾಯಿತಿ, ಹೊಸಕೋಟೆ ಟೌನ್.

5. ತಾಲ್ಲೂಕು ಆಡಳಿತ ಸೌಧ, ನೆಲಮಂಗಲ ಟೌನ್.

6. ಸರ್ಕಾರಿ ಮಾದರಿ ಪ್ರೌಢಶಾಲೆ, ರೂ.ನಂ 02, ಸೋಂಪುರ ಹೋಬಳಿ ನೆಲಮಂಗಲ ತಾಲ್ಲೂಕು.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರು/ಅಹವಾಲುಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆರವರ ಕಚೇರಿ ಹಾಗೂ ಜಿಲ್ಲೆಯ ಉಪವಿಭಾಗಾಧಿಕಾರರಿಗಳ ಕಚೇರಿ ಮತ್ತು ತಹಸೀಲ್ಧಾರ್ ಕಚೇರಿಗಳಲ್ಲಿ ದೂರು ನೀಡಬಹುದಾಗಿರುತ್ತದೆ ಎಂದರು. ಚುನಾವಣೆ ಪಾರದರ್ಶಕತೆ, ಮುಕ್ತ, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಜರುಗುವಲ್ಲಿ ಪ್ರತಿಯೊಬ್ಬ ಮತದಾರರು, ಎಲ್ಲಾ ರಾಜಕೀಯ ಪಕ್ಷಗಳು,ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರು ಡಿ. ಅಶೋಕ್ ಕುಮಾರ್ ಡಿ., ಉಪಸ್ಥಿತರಿದ್ದರುಕಚೇರಿ

Ramesh Babu

Journalist

Recent Posts

ಮಾನವೀಯ ಸಂಬಂಧಗಳ ಹುಡುಕುತ್ತಾ………

ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ…

5 hours ago

ಹೊನ್ನಘಟ್ಟದಲ್ಲಿ ಮೂರೂವರೆ ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊನ್ನಘಟ್ಟ ಗ್ರಾಮದಲ್ಲಿ ಸುಮಾರು ಮೂರೂವರೆ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಅದನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ…

1 day ago

ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ವಿವಿಧ…

1 day ago

‘ಬೆಂ.ಗ್ರಾ ಜಿಲ್ಲೆಯಲ್ಲಿ 62,854 ಹೆಕ್ಟೇರ್ ಬೆಳೆ ಹಾನಿ: ರೈತರಿಗೆ 52.88 ಕೋಟಿ ಪರಿಹಾರದ ಅಂದಾಜು’

ದೇವನಹಳ್ಳಿ: ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ…

1 day ago

ಪಾರಿವಾಳ ಗುಟ್ಟದ ಬಳಿ ಕನ್ನಡ ಭವನ, ಆವತಿ ಬಳಿ ಕೆಂಪೇಗೌಡ ಥೀಮ್ ಪಾರ್ಕ್-ಕೆ.ಎಚ್ ಮುನಿಯಪ್ಪ

ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ದೈನಂದಿನ ಜೀವನದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ…

1 day ago

ಕನ್ನಡ ರಾಜ್ಯೋತ್ಸವ: ದೀಪಾಲಂಕಾರದಿಂದ ಕಂಗೊಳಿಸಿದ ಘಾಟಿ ಸುಬ್ರಹ್ಮಣ್ಯ ದೇವಾಲಯ

ದೊಡ್ಡಬಳ್ಳಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.…

1 day ago