46 ಮಂದಿಗೆ ಜೀ ಅಚೀವರ್ಸ್‌ ಅವಾರ್ಡ್-2025 ಪ್ರದಾನ

ಜೀ ಕನ್ನಡ ನ್ಯೂಸ್‌ ಮೂರನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ 46 ಮಂದಿಯನ್ನ ಗುರುತಿಸಿ ಜೀ ಅಚೀವರ್ಸ್‌ ಅವಾರ್ಡ್-2025 ಪ್ರದಾನ ಮಾಡಲಾಯಿತು.

ಬೆಂಗಳೂರಿನ ಪ್ರತಿಷ್ಠಿತ ‘ದಿ ರಿಟ್ಜ್‌ ಕಾರ್ಲ್ಟ್ರನ್‌’ ಹೋಟೆಲ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ
ಡಿಸಿಎಂ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಿದ್ದರು.

ರಾಜ್ಯದ ವಿವಿಧ ಸಾಧಕರಿಗೆ ಡಿಕೆ ಶಿವಕುಮಾರ್ ಅವರು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಇದೇ ವೇಳೆ ಮಾತಾಡಿದ ಡಿಕೆಶಿ ಅವರು. ಜೀ ಕನ್ನಡ ನ್ಯೂಸ್‌ ಗುರ್ತಿಸಿರೋ ಸಾಧಕರು ನಿಜಕ್ಕೂ ಸಮಾಜದ ಆಸ್ತಿ. ನಾಡು ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸನ್ಮಾನ ಮತ್ತು ಪ್ರಶಸ್ತಿಗಳು ಸೇವೆಗೆ ಕೊನೆಯೆಂದು ಭಾವಿಸಬಾರದು. ಮತ್ತಷ್ಟು ಪ್ರೇರಣೆ ಮತ್ತು ಹುಮ್ಮಸ್ಸು ಎಂದು ತಿಳಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ವೇಳೆ ಜೀ ಕನ್ನಡ ನ್ಯೂಸ್‌ ಸಂಪಾದಕರಾದ ರವಿ ಅವರು ಸ್ವಾಗತ ಭಾಷಣದಲ್ಲಿ ಅವಾರ್ಡಿಗಳ ಸೇವೆ ಮತ್ತು ಕೈಂಕರ್ಯವನ್ನ ಗುಣಗಾನ ಮಾಡಿದರು. ಅಲ್ಲದೇ ಜೀ ಕನ್ನಡ ನ್ಯೂಸ್‌ ಮೂರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಮಸ್ತ ವೀಕ್ಷಕರ ಸಹಕಾರಕ್ಕೆ ಧನ್ಯವಾದಗಳನ್ನ ತಿಳಿಸಿದರು.

ಮಾಜಿ ಸಿಎಂ ಡಿವಿ ಸದಾನಂದಗೌಡ, ಸಚಿವರಾದ ರಾಮಲಿಂಗಾರೆಡ್ಡಿ, ಚಿತ್ರತಾರೆಯರಾದ ಧೃವ ಸರ್ಜಾ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು.

ಜೊತೆಗೆ ಡಾ.ರಾಜಕುಮಾರ್ ಪುತ್ರಿಯರಾದ ಪೂರ್ಣಿಮಾ ರಾಮ್‌ಕುಮಾರ್‌ ಹಾಗೂ ಲಕ್ಷ್ಮಿ ಗೋವಿಂದರಾಜು ಹಾಜರಿದ್ದು, ಸಾಧಕರನ್ನು ಸನ್ಮಾನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ 46 ಸಾಧಕರನ್ನು ಅಭಿನಂದಿಸಿರೋ ವಿಡಿಯೋ ಪ್ಲೇ ಮಾಡಲಾಯಿತು.

ಜೀ ಕನ್ನಡ ನ್ಯೂಸ್‌ ಗುರ್ತಿಸಿರೋ ಅಚೀವರ್ಸ್‌ ನಾಡು-ನುಡಿ, ನೆಲ-ಜಲ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಎಲೆಮರೆಯ ಕಾಯಿಯಂತಿರೋ ವ್ಯಕ್ತಿಗಳಿಗೆ ಮುಖ್ಯವಾಹಿನಿ ಕಲ್ಪಿಸಿಕೊಟ್ಟು ಗೌರವಿಸಿರೋದು ಉತ್ತಮ ಕಾರ್ಯ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ರಾಮಲಿಂಗಾರೆಡ್ಡಿ : ಸದ್ದಿಲ್ಲದೆ ಸ್ವಂತಕ್ಕೆ ಏನನ್ನೂ ಗಳಿಸಿಕೊಳ್ಳದ ನಿಸ್ವಾರ್ಥ ಜನರು ನಾಡಿನ ಉದ್ದಗಲಕ್ಕೂ ಜೀವಿಸುತ್ತಿದ್ದಾರೆ. ಸದಾ ಸಮಾಜ, ರಾಜ್ಯಕ್ಕೆ ಮಿಡಿಯುವ ಸ್ಪಂದಿಸುವ ಮಂದಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ರಾಜ್ಯವು ಅಭಿವೃದ್ಧಿಯಾಗಲಿದೆ. ಸಮೂಹ ಮಾಧ್ಯಮಗಳು ಎಲೆಮರೆ ಕಾಯಿಯಂತಿರೋ ಮಂದಿಗೆ ಕೈ ಕೊಟ್ಟು ಮುಖ್ಯವಾಹಿನಿಗೆ ತಂದು ಬಿಟ್ಟರೆ ಉಪಯೋಗ ಹೆಚ್ಚಾಗಲಿದೆ.

ಡಿ.ವಿ. ಸದಾನಂದಗೌಡ :- ರಾಜ್ಯದ ಉದ್ದಗಲದ ಸಾಧಕರನ್ನು ಗುರ್ತಿಸಿ ವೇದಿಕೆ ಕಲ್ಪಿಸಿಕೊಟ್ಟದ್ದೀರಿ. ಬದಲಾದ ಮಾಧ್ಯಮಗಳ ಸಂರಚನೆಯಾದ ಸೋಷಿಯಲ್‌ ಮೀಡಿಯಾ, AI ರೀತಿಯ ಸಮೂಹ ಮಾಧ್ಯಮ ಜನರನ್ನ ಕ್ಷಣಾರ್ಧದಲ್ಲಿ ಆಕರ್ಷಿಸುತ್ತಿದೆ. ಮುಂದಿನ ದಾರಿದೀಪ ಹೆಜ್ಜೆಗುರುತು ಸೃಷ್ಟಿಸುವ ಜೀ ಕನ್ನಡ ನ್ಯೂಸ್‌ ಕಾರ್ಯ ಮರೆಯೋ ಹಾಗಿಲ್ಲ. ನಿಜವಾದ ಸಾಧಕರಿಗೆ ಸನ್ಮಾನ ದೊರೆತಿರುವುದು ಅಭಿನಂದನೀಯ.

ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ :- ವಸ್ತುನಿಷ್ಠ ಸುದ್ದಿ ಪ್ರಸಾರದಿಂದ ಜೀ ಕನ್ನಡ ನ್ಯೂಸ್‌ ರಾಜ್ಯದ ಜನರ ಮನಸಿಗೆ ಮುಟ್ಟಿದೆ. ಮೂರನೆ ವರ್ಷದ ವಾರ್ಷಿಕೋತ್ಸವ ಸಂಭ್ರದಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿರೋ ಗಣ್ಯರನ್ನ ಗುರ್ತಿಸಿ ಗೌರವ ಸಲ್ಲಿಸಿರುವುದು ಅಭಿನಂದನೆಗೆ ಅರ್ಹವಾದುದು. ಕಾಲ ಕಾಲಕ್ಕೆ ಬದಲಾವಣೆ ಅಗತ್ಯವಿರೋ ಹಾಗೆ ಗಣ್ಯರ ಸಾಧನೆ ವಿಭಿನ್ನವಾಗಿದ್ದು ಗುರ್ತಿಸುವಿಕೆ ಕೂಡ ಅಗಾಧ ಪ್ರಕ್ರಿಯೆ. ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕರ ಸನ್ಮಾನ ಮತ್ತೊಂದು ಸಾಧನೆಗೆ ಮೆಟ್ಟಿಲಾಗಲಿ, ಸ್ಪೂರ್ತಿಯಾಗಲಿ.

ಜೀ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್‌ 2024 ಪ್ರಶಸ್ತಿ ಪುರಸ್ಕೃತರು

1. ಸತ್ಯನಾರಾಯಣ, ರಾಷ್ಟ್ರೀಯ ಪ್ಯಾರಾಲಿಂಪಿಕ್ ಕೋಚ್‌
2. ಸಂಜಯ್ ಬೈದ್‌, ಉದ್ಯಮಿ
3. ಬಿಸಿ ಜಯಪ್ರಸಾದ್‌, ಸಾವಯವ ಕೃಷಿಕ
4. ಗೋಪಿಕೃಷ್ಣ, ಸಮಾಜ ಸೇವಕ
5. ಶಶಿಕುಮಾರ್ ತಿಮ್ಮಯ್ಯ, ಉದ್ಯಮಿ
6. ಕೆ.ಎಂ.ಸಂದೇಶ್‌, ಸಮಾಜ ಸೇವಕ
7. ಸುಂದರ್‌ ರಾಜ್‌ಪತ್ತಿ, ಉದ್ಯಮಿ
8. ಡಾ.ಎಎಸ್‌ ಬಾಲಸುಬ್ರಮಣ್ಯ, ಶಿಕ್ಷಣ ತಜ್ಞರು
9. ನವೀನ್ ಕೆ, ಉದ್ಯಮಿ
10. ನಿರ್ಮಲಾ ಹೆಚ್‌ ಸುರಪುರ, ಸಮಾಜ ಸೇವಕರು
11. ನರಸಿಂಹಮೂರ್ತಿ ಮದ್ಯಸ್ತ, ಹೋಟೆಲ್‌ ಉದ್ಯಮಿ
12. ಜೆ.ವೆಂಕಟೇಶ್‌, ಸಮಾಜ ಸೇವಕ
13. ಡಾ.ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು
14. ಡಾ. ಎನ್‌. ಕೀರ್ತಿರಾಜ್‌, ಜ್ಯೋತಿಷಿ
15. ಎಂ.ಶಿವರಾಜ್‌, ಬಿಬಿಎಂಪಿ ಮಾಜಿ ಕಾರ್ಪೊರೇಟರ್‌
16. ರಾಘವೇಂದ್ರ ಕುಲಕರ್ಣಿ, ಜ್ಯೋತಿಷಿ
17. ಡಾ.ಶ್ರೀ ಸುಪ್ರೀತ್‌, ಆಧ್ಯಾತ್ಮಿಕ ಚಿಂತಕರು
18. ಮಲ್ಲಿಕಾರ್ಜುನ ಗಂಗಾಂಬಿಕೆ, ಸಮಾಜ ಸೇವೆ
19. ಡಾ.ದ್ಯಾನೇಶ್ವರ್‌, ವೈದ್ಯರು
20. ಗಂಗಾಧರ ರಾಜು, ಸಮಾಜ ಸೇವೆ
21. ಡಾ.ಜಿ.ಎಸ್.ರವಿ, ಶಿಕ್ಷಣ ತಜ್ಞರು
22. ಎ.ಅಮೃತರಾಜ್‌, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ
23. ಬಸವರಾಜ ಆರ್‌.ಕಬಾಡೆ, BSWML BBMP ಮುಖ್ಯ ಎಂಜಿನಿಯರ್‌
24. ಡಾ.ಕೆ. ಮುನಿಯಪ್ಪ ಓದೇನಹಳ್ಳಿ, ಸಮಾಜ ಸೇವಕ-ಬಿಜೆಪಿ ನಾಯಕ
25. ವೇಲು ನಾಯ್ಕರ್‌, ಬಿಬಿಎಂಪಿ ಮಾಜಿ ಕಾರ್ಪೊರೇಟರ್‌
26. ಎನ್.‌ರೀನಾ ಸುವರ್ಣ, ACP-ವೈಟ್‌ಫೀಲ್ಡ್‌
27. ಡಾ.ಜಿಎಸ್‌ ಶ್ರೀಧರ್‌, ಸಮಾಜ ಸೇವಕರು
28. ಪ್ರೊ.ಎಂ.ವಿ.ಪ್ರಕಾಶ್‌, ಶಿಕ್ಷಣ ತಜ್ಞರು
29. ಅಲಗಣಿ ಕಿರಣ್‌ಕುಮಾರ್‌, ಸಮಾಜ ಸೇವಕರು
30. ಜಿಎಸ್‌. ಶಶಿಕುಮಾರ್‌, ಸಮಾಜ ಸೇವಕರು
31. ಡಿಎಸ್‌ ರಾಮಲಿಂಗೇಗೌಡ, ಸಮಾಜ ಸೇವಕರು
32. ಟಿಜಿ ವಿಶ್ವಾಸ್‌, ಉದ್ಯಮಿ
33. ಡಾ.ಜಿಎಸ್‌ ಲತಾ ಜೈಪ್ರಕಾಶ್‌, ಸಮಾಜ ಸೇವಕ-ಉದ್ಯಮಿ
34. ಎಸ್‌.ಕುಮಾರ್‌, ಸಮಾಜ ಸೇವಕರು
35. ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ-ರಕ್ಷಣಾ ತಜ್ಞರು
36. ಡಾ.ಶ್ರೀಮಂತ್‌ ಕುಂಬಾರ್‌, ವೈದ್ಯರು
37. ಡಾ.ಫಾರೂಕ್‌ ಅಹ್ಮದ್‌ ಮಣೂರ್‌, ವೈದ್ಯರು
38. ಅರುಣಕುಮಾರ್‌ ಎಸ್‌.ಪಾಟೀಲ್‌, ಸಮಾಜ ಸೇವಕರು
39. ಯು.ಜೆ. ಮಲ್ಲಿಕಾರ್ಜುನ್‌, ಕನ್ನಡ ಹೋರಾಟಗಾರ-ಸಮಾಜ ಸೇವಕರು
40. ಕೃಷ್ಣಮೂರ್ತಿ ಸಿಎನ್‌, ಸಮಾಜ ಸೇವಕರು
41. ಡಾ.ಪಂಡಿತ ಶ್ರೀ ಸಿದ್ದಾಂತ ಅರಣ್ ಶರ್ಮ, ಜ್ಯೋತಿಷಿ-ವಾಸ್ತು ಸಲಹೆಗಾರರು
42. ಸಿಎಂ ಶಾಬಾಜ್‌ ಖಾನ್‌, ಸಮಾಜ ಸೇವಕರು
43. ಅನಿಲ್ ಕುಮಾರ್‌ ಜಿ.ಆರ‌, ಶಿಕ್ಷಣ ತಜ್ಞರು
44. ಡಾ.ಆಶಿಕ್‌, ಬಿಜಿ, ವೈದ್ಯರು
45. ಸುರೇಶ್‌ ಶಂಕರ್ ಜತ್ತಿ, ಶಿಕ್ಷಣ ತಜ್ಞರು
46. ಎಂಬಿ. ಜೋಷಿ, ಜ್ಯೋತಿಷಿ

Ramesh Babu

Journalist

Recent Posts

ತಿರುಮಗೊಂಡಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಘಾಟಿ ಪ್ರಾಧಿಕಾರದ ಸದಸ್ಯರ ಮನವಿ

ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ‌‌ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು,…

4 hours ago

ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿಂದ ಆರ್‌ಟಿಐ ಅರ್ಜಿಗಳ ವಿಲೇವಾರಿ ವಿಳಂಬ- ಮಾಹಿತಿ ಆಯುಕ್ತ ಹರೀಶ್ ಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…

5 hours ago

ಧರ್ಮಸ್ಥಳ ಕೇಸ್ ವಿಚಾರ: ತನಿಖೆ ಬೇಗ ಮುಗಿಸಿ ನ್ಯಾಯ ಕೊಡಿಸಿ ಭಾರತೀಯ ಪರಂಪರೆಯನ್ನ ಉಳಿಸಬೇಕು- ಸಚಿವ ವಿ.ಸೋಮಣ್ಣ

ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು…

6 hours ago

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…

6 hours ago

ಪ್ರಜ್ವಲ್ ರೇವಣ್ಣ ಕೇಸ್: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಜೀವನ‌ಪರ್ಯಂತ ಸೆರೆಮನೆ ವಾಸ

ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ದೋಷಿ ಎಂದು…

8 hours ago

ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…

17 hours ago