40 ಕೋಟಿ ಮೌಲ್ಯದ 6 ಎಕರೆ ಸರ್ಕಾರಿ ಆಸ್ತಿ ಸರ್ಕಾರದ ವಶ: ಡಿಸಿ ಕ್ರಮಕ್ಕೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಅಭಿನಂದನೆ ಸಲ್ಲಿಕೆ

ದೊಡ್ಡಬಳ್ಳಾಪುರ : 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜುರವರ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಜಿಲ್ಲಾಧಿಕಾರಿಗಳನ್ನ ಅಭಿನಂದಿಸುವ ಮೂಲಕ ಭೂಗಳ್ಳರಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿದರು.

ದೊಡ್ಡಬಳ್ಳಾಪುರ ನಗರದಂಚಿನ ಅರೇಹಳ್ಳಿಗುಡ್ಡದಹಳ್ಳಿ ಸರ್ವೆ ನಂಬರ್ 57ರ ಸರ್ಕಾರಿ ಗೋಮಾಳದಲ್ಲಿ 6 ಎಕರೆ ಜಾಗವನ್ನ ಅಕ್ರಮವಾಗಿ ಮಂಜೂರು ಮಾಡಲಾಗಿತ್ತು. ಕಾನೂನುಬಾಹಿರವಾಗಿ ಮಂಜೂರಾತಿಯನ್ನ ವಜಾ ಮಾಡುವಂತೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಹೋರಾಟ ಮಾಡಿತ್ತು. ಹೋರಾಟದ ಫಲ ಕಾನೂನುಬಾಹಿರ ಮಂಜೂರಾತಿ ವಜಾ ಆಗಿದೆ, ಜಿಲ್ಲಾಧಿಕಾರಿಗಳಾದ ಬಸವರಾಜು ಸೆಪ್ಟೆಂಬರ್ 2ರಂದು ಹೊರಡಿಸಿದ ಆದೇಶದಲ್ಲಿ  ಸುಮಾರು 40 ಕೋಟಿ ಮೌಲ್ಯದ 6 ಎಕರೆ ಜಾಗವನ್ನ ಸರ್ಕಾರಿ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾಧಿಕಾರಿಗಳ ದಿಟ್ಟ ಕ್ರಮ, ಭೂಗಳ್ಳರಿಗೆ ಎಚ್ಚರಿಕೆ ಸಂದೇಶವನ್ನ ರವಾನೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕಾನೂನುಬಾಹಿರ ಮಂಜೂರಾತಿ ವಜಾ ಮಾಡುವಂತೆ ಹೋರಾಟ ಮಾಡಿದ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯು.ಮುನಿರಾಜು ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳನ್ನ ಅಭಿನಂದಿಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಯು.ಮುನಿರಾಜು, ಸರ್ಕಾರಿ ಗೋಮಾಳ ಜಾಗವನ್ನ ಕಾನೂನುಬಾಹಿರವಾಗಿ ನಾಲ್ಕು ಮಂದಿಗೆ ಮಂಜೂರಾತಿ ಮಾಡಲಾಗಿತ್ತು, ಇದರ ವಿರುದ್ಧ ನಮ್ಮ ಸಂಘಟನೆ ಬೀದಿಗಿಳಿದು ಹೋರಾಟ ಮಾಡಿತ್ತು, ಮಂಜೂರಾತಿಯನ್ನ ವಜಾ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ಯಾವುದಕ್ಕೂ ಅಂಜದೆ ಬಗ್ಗದೆ ಜಾಗವನ್ನ ಸರ್ಕಾರಿ ವಶಕ್ಕೆ ಪಡೆದಿದ್ದಾರೆ, ಅವರಿಗೆ ನಾವು ಅಭಿನಂದನೆ ಸಲ್ಲಿಸಿದ್ದೇವೆ.

ಇದೇ ವೇಳೆ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಕಾನೂನುಬಾಹಿರವಾಗಿ ಭೂ ಮಂಜೂರಾತಿ ಮಾಡಿಸಿಕೊಂಡ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಯಾವ ಆಧಾರ ಮೇಲೆ ಅಧಿಕಾರಿಗಳು ಭೂ ಮಂಜೂರಾತಿ ಮಾಡಿದರು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳ ಬೇಕೆಂಕು. ತಾಲೂಕಿನಲ್ಲಿ ರಾಜಕಾಲುವೆ, ನೀರುಗಾಲುವೆ, ಸ್ಮಶಾನ, ಸರ್ಕಾರಿ ಗೋಮಾಳವನ್ನ ಒತ್ತುವರಿ ಮಾಡಲಾಗಿದೆ ಇವರು ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.

ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಪ್ರಜಾ ವಿಮೋಚನ ಚಳವಳಿ, ಜನಧ್ವನಿ ವೇದಿಕೆ,  ಭೂಮಿ ವಸತಿ ವಂಚಿತರ ಹೋರಾಟ ಸಮಿತಿ, ರೈತಪರ ಸಂಘಟನೆ, ಕನ್ನಡಪರ ಸಂಘಟನೆಗಳು, ವಕೀಲರು ಮತ್ತು ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!