
ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಇಂದು(ಶುಕ್ರವಾರ) ಹುಂಡಿ ಕಾಣಿಕೆ ಎಣಿಕೆ ಮಾಡಲಾಯಿತು.
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಶುಕ್ರವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, ರೂ.65,65,445 ಹಣ ಸಂಗ್ರಹವಾಗಿದೆ.
ಇದರೊಂದಿಗೆ 73,600 ರೂ ಮೌಲ್ಯದ 01 ಕೆಜಿ ಬೆಳ್ಳಿ, 2,800 ರೂ ಮೌಲ್ಯದ 700 ಮಿಲಿ ತೂಕದ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.
ಹುಂಡಿ ಕಾಣಿಕೆ ಎಣಿಕೆ ಕಾರ್ಯದಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ. ದಿನೇಶ್, ಉಪ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ. ಹೇಮಾವತಿ, ಪ್ರಧಾನ ಅರ್ಚಕ ಶ್ರೀನಿಧಿ, ಪ್ರಾಧಿಕಾರದ ಸದಸ್ಯರಾದ ಜೆ.ಎನ್ .ರಂಗಪ್ಪ, ಎಸ್ .ರವಿ, ಲಕ್ಷ್ಮ ನಾಯಕ್, ಆರ್. ವಿ ಮಹೇಶ್ ಕುಮಾರ್, ಹೇಮಲತಾ ರಮೇಶ್, ಪೋಲಿಸ್ ಸಿಬ್ಬಂದಿ ದೇವಾಲಯದ ಸಿಬ್ಬಂದಿ, ಇಂಡಿಯಾನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.