ರೋಟರಾಕ್ಟ್ ಬೆಂಗಳೂರು, ಬಸವೇಶ್ವರನಗರ (ರೋಟರಾಕ್ಟ್ ಡಿಸ್ಟ್ರಿಕ್ಟ್ 3192) ಹಾಗೂ ಸುಚೇತನಾ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್(ರಿ) ಸಹೋಗದಲ್ಲಿ ಆಯೋಜಿಸಿದ್ದ “ವಿದ್ಯಾ ಸಂಕಲ್ಪ” ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಅರವಿಂದ ಪ್ರಾರ್ಥಮಿಕ ಪಾಠ ಶಾಲಿಯ 30 ಮಕ್ಕಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವಿದ್ಯಾ ಸಂಲಕ್ಪ ಯೋಜನೆಯನ್ನು ಕಳೆದ 4 ವರ್ಷದಿಂದ ಮುಂದುವರಿಸಿಕೊಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲೂ ಬಡ ಮಕ್ಕಳಿಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡುವುದರ ಜೊತೆಗೆ ಕನ್ನಡ ಮಾಧ್ಯಮಕ್ಕೆ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ ಖಜಾಂಚಿ ವೆಂಕಪ್ಪ, ಶಾಲಾ ಪ್ರಾಂಶುಪಾಲ ಸರ್ವಮಂಗಳ, ಹಿರಿಯ ಶಿಕ್ಷಕ ವಸಂತ್ ರಾಜ್, ಸುರೇಶ್, ರೋಟರಾಕ್ಟ್ ಹಾಗೂ ಸುಚೇತನ ತಂಡದ ಮಂಜುನಾಥ್ ನಾಗ್, ಚೇತನ್, ದೀಪಿಕಾ, ಅಭಿಷೇಕ್, ನಮಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.