
ದೊಡ್ಡಬಳ್ಳಾಪುರ:- 30ನೇ ಅಂತಾರಾಷ್ಟ್ರೀಯ ಯೋಗ ಫೆಸ್ಟಿವಲ್ ಪುದುಚೇರಿ-2025 ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ಯೋಗಪಟು ಜಿ.ಸಿ.ಹೃತಿಕ್ ಗೆ ಚಿನ್ನದ ಪದಕ ಗೆದ್ದಿದ್ದಾರೆ.
ಇದೇ ಜನವರಿ 4 ರಿಂದ 7ರವರೆಗೆ ಪುದುಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನಿರ್ವಹಿಸಿದ 30ನೇ ಅಂತಾರಾಷ್ಟ್ರೀಯ ಯೋಗಾಸನ ಫೆಸ್ಟಿವಲ್ ನಲ್ಲಿ ದೊಡ್ಡಬಳ್ಳಾಪುರದ ಆಕ್ಟಿವ್ ಡ್ಯಾನ್ಸ್ ಕಂಪನಿಯಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಜಿ.ಸಿ.ಹೃತಿಕ್ ಅವರು 9-14 ಬಾಲಕರ ವಯಸ್ಸಿನ ವಯೋಮಿತಿಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಚಿನ್ನ ಗೆದ್ದ ಯೋಗಾಪಟುವಿಗೆ ಯೋಗಾ ಶಿಕ್ಷಕರಾದ ರಘು ಹೆಚ್. ಜಿ. ಅವರು ಮತ್ತು ಡ್ಯಾನ್ಸ್ ಕೊರಿಯೋಗ್ರಾಫರ್ ಅದ ಆನಂದ್, KYSA ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ನಿರಂಜನ್ ಮೂರ್ತಿ ಮತ್ತು ಡೈರೆಕ್ಟರ್ ಪರಶುರಾಮಪ್ಪ ಮತ್ತು ಮತ್ತು ಕರ್ನಾಟಕ ತಂಡಕ್ಕೆ ಪುದುಚೇರಿಯಲ್ಲಿ ಮೇಲ್ವಿಚಾರಕ ಪ್ರೇಮ್ ಕುಮಾರ್ ಮುದ್ದೆ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.