ಹೈದರಾಬಾದ್‌ನಲ್ಲಿ 3.5 ಟನ್ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಪೇಸ್ಟ್ ಅನ್ನು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಸಿಂಥೆಟಿಕ್ ಫುಡ್ ಕಲರ್, ಗಮ್ ಪೌಡರ್, ಸೋಡಿಯಂ ಬೆಂಜೊಯೇಟ್ ಮತ್ತು ಕೊಳೆತ ಬೆಳ್ಳುಳ್ಳಿ ಸಿಪ್ಪೆಗಳಿಂದ ತಯಾರಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಉತ್ಪನ್ನವನ್ನು ರೋಶನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಮಾಸ್ ಡೈಮಂಡ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಜೇಂದ್ರನಗರ ವಿಶೇಷ ಕಾರ್ಯಾಚರಣೆ ತಂಡವು ಕಟೆಧಾನ್ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದು, 3,500 ಕೆಜಿ ನಕಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ವಶಪಡಿಸಿಕೊಂಡಿದೆ. 2,80,000 ರೂ. ಮೌಲ್ಯದ ಬೆಲ್ಲದ ಪುಡಿ, ಸಿಂಥೆಟಿಕ್ ಫುಡ್ ಕಲರ್ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ಪಾದನಾ ಘಟಕವನ್ನು ಚಾರ್ಮಿನಾರ್ ಪ್ರದೇಶದ 34 ವರ್ಷದ ಮೊಹಮ್ಮದ್ ಅಹ್ಮದ್ ನಿರ್ವಹಿಸುತ್ತಿರುವುದು ಕಂಡುಬಂದಿದೆ.