ಮಂಗಳಮುಖಿಗೆ ಮನಸೋತ ವಿವಾಹಿತ ಮಹಿಳೆ: ತಾಳಿ ಕಟ್ಟಿದ ಗಂಡನನ್ನೆ ತ್ಯಜಿಸಲು ಸಿದ್ಧವಾದ ಗೃಹಣಿ: ತನ್ನ ಪತ್ನಿ ಬೇಕು ಎಂದು ಪಟ್ಟುಹಿಡಿದ ಪತಿ

ಹಾವೇರಿ: ಮೂರು ಮಕ್ಕಳ ಗೃಹಿಣಿಯೊಬ್ಬರು ನಿರಂತರವಾಗಿ ಮಂಗಳಮುಖಿಯ ಸಹವಾಸ ಮಾಡಿ ತಾಳಿ ಕಟ್ಟಿದ ಗಂಡನನ್ನೆ ತ್ಯಜಿಸಲು ಮುಂದಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಎರಡು ತಿಂಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ತನ್ನ ಪತ್ನಿ ಮಂಗಳಮುಖಿಯೊಂದಿಗೆ ತೆರಳಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಒಪ್ಪದ ಪತಿ ವಿರುದ್ಧ ಪತ್ನಿ  ಸಿಡಿದೆದ್ದಾರೆ. ದಂಪತಿ ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿಗಳಾಗಿದ್ದು, ರಾಣೇಬೆನ್ನೂರಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.

ಸಂತ್ರಸ್ತೆಯ ಮನಸ್ಸು ಮಂಗಳಮುಖಿಯರು ಬದಲಿಸಿದ್ದಾರೆ ಎಂದು ಪತಿ ಯಮನಪ್ಪ ದೂರು ನೀಡಿದ್ದಾರೆ. ಗೃಹಿಣಿಯು ತನ್ನ ಪತಿ ಜೊತೆ ಹೋಗಲು ಒಪ್ಪದ ಕಾರಣ, ಸದ್ಯ ಸಾಂತ್ವಾನ ಕೇಂದ್ರದಲ್ಲಿ ಸಂಧಾನ ಕಾರ್ಯ ನಡೆಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಲೈಂಗಿಕ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯಿಸಿ, ಇದು ಅವರ ಅವರ ಖಾಸಗಿ ವಿಚಾರ, ಅವರಿಬ್ಬರ ಪ್ರೀತಿಯನ್ನು ನಾನು ಒಪ್ಪಿಕೊಳ್ತೇನೆ ಜೊತೆಗೆ ಗೌರವಿಸ್ತೇನೆ. ಆದರೆ ಎಲ್ಲಾ ಮಂಗಳಮುಖಿಯರು ಬಲವಂತವಾಗಿ ಯಾರನ್ನು ಪರಿವರ್ತನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಣ್ಣು ಹೆಣ್ಣನ್ನ ಪ್ರೀತ್ಸೋದು, ಗಂಡು ಗಂಡನ್ನ ಪ್ರೀತ್ಸೋದು ಸಾಂವಿಧಾನಿಕವಾಗಿ ಸರಿ ಇದೆ. ಹೀಗಾಗಿ ನಮಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ನಾವು ಸಂಧಾನ ಮಾಡಿದಾಗಲೂ ಅವರು ತನ್ನ ನಿರ್ಧಾರ ತೆಗೆದುಕೊಂಡಿದ್ದಾರೆ.

ಲಿಂಗ ಬದಲಾವಣೆ, ಒತ್ತಾಯದ ಮನಃಪರಿವರ್ತನೆ ನಾವು ಮಾಡುವುದಿಲ್ಲ, ಆದರೆ ಅವರಿಬ್ಬರು ಪ್ರೀತಿ ಮಾಡುತ್ತಾ ಇರೋದು ಸತ್ಯ ಇದೆ ಎಂದಿದ್ದಾರೆ.

Leave a Reply

Your email address will not be published. Required fields are marked *