PUC ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ 600/597 ಅಂಕ ಪಡೆದ ಸಂಜನಾಬಾಯಿ ರಾಜ್ಯಕ್ಕೆ ಪ್ರಥಮರಾಗಿದ್ದಾರೆ.
ಸಂಜನಾಬಾಯಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದರು, ಅವರ ಸಾಧನೆ ವಿಜಯನಗರ ಜಿಲ್ಲೆಗೆ ಕೀರ್ತಿ ತಂದಿದೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದವರು ಸಂಜನಾಬಾಯಿ, ಅವರ ತಂದೆ ಎಲ್. ಕೆ.ರಾಮನಾಯ್ಕ್ ಲಾರಿ ಡ್ರೈವರ್ ವೃತ್ತಿ ಮಾಡುತ್ತಿದ್ದಾರೆ, ತಾಯಿ ಎಲ್.ಕಾವೇರಿ ಗೃಹಿಣಿಯಾಗಿದ್ದಾರೆ, ಲಾರಿ ಡ್ರೈವರ್ ಮಗಳ ಸಾಧನೆಗೆ ಇಡೀ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.