ರಕ್ತ ಹೀನತೆ ತಪಾಸಣಾ ಶಿಬಿರ

ಫೆ.24 ರಿಂದ 28ರವರೆಗೆ ನಡೆದ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಐ. ಎ. ಐ. ಎಮ್ ಸಹಯೋಗದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ರಕ್ತ ಹೀನತೆ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಸ್ತ್ರೀರೋಗ ತಜ್ಞರಾದ ಡಾ‌. ಇಂದಿರಾ ರವರು ಮಾತನಾಡಿ  “ರಕ್ತ ಹೀನತೆ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು ಇದು ಆತಂಕಕಾರಿಯಾಗಿದೆ. ತಾಯಂದಿರ ಸಾವಿಗೆ ಮುಖ್ಯ ಕಾರಣ ರಕ್ತ ಹೀನತೆ. ಹಾಗಾಗಿ ನಾವು ನಮ್ಮ ಆಹಾರ ಶೈಲಿಯ ಮೇಲೆ ಗಮನಹರಿಸಬೇಕಿದೆ. ಫೈಬರ್, ಪ್ರೋಟೀನ್, ವಿಟಮಿನ್ ನೀಡುವ ಆಹಾರಗಳನ್ನು ಪ್ರಜ್ಞಾಪೂರ್ವಕವಾಗಿ ಸೇವಿಸುವುದನ್ನು ಅಳವಡಿಸಿಕೊಳ್ಳಬೇಕು ಹಾಗೂ ಅವುಗಳು ಜೀರ್ಣವಾಗುವಷ್ಟು ದೈಹಿಕ ಚಟುವಟಿಕೆ ಇರಬೇಕು. ಹೆಣ್ಣಿಗೆ 12 ವರ್ಷಗಳು ತುಂಬಿದ ನಂತರದಿಂದ ತನ್ನ ಜೀವನಾವದಿ ಮುಗಿಯುವವರೆಗು 12 ಗ್ರಾಂ ಎಚ್. ಬಿ ಇದ್ದರೆ ಯಾವುದೇ ರೋಗ ಬರುವುದಿಲ್ಲ ಜೊತೆಗೆ ದೇಹದ ಆರೋಗ್ಯಕ್ಕೆ ಬೇಕಾದ ಚಟುವಟಿಕೆಗಳನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಯಾವ ರೋಗ ಬಂದರು ಜಯಿಸಿಕೊಳ್ಳಬಹುದು” ಎಂದು ಹೇಳಿದರು.

ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ (ರಿ.) ನ ಅಧ್ಯಕ್ಷ ಚದಾಂದಮೂರ್ತಿ ಮಾತನಾಡಿ, ಇಂದಿನ ಮಕ್ಕಳು ಅಮ್ಮನ ಕೈ ತುತ್ತಿಗಿಂತಲು ರಸ್ತೆ ಬದಿಯಲ್ಲಿನ ಪಾನಿಪೂರಿಯವರ ಕೈ ತುತ್ತುಗಳನ್ನೇ ಹೆಚ್ಚಾಗಿ ತಿನ್ನುವಂತಾಗಿದೆ. ಇದರಿಂದ ಆರೋಗ್ಯ ಹಾಳಾಗುವುದಲ್ಲದೆ ದೈಹಿಕ ಬೆಳೆವಣಿಗೆ ಮೇಲೂ ಪರಿಣಾಮ ಬೀರಲಿದೆ. ಅದರಲ್ಲೂ ಹೆಣ್ಣು ಮಕ್ಕಳು ರಕ್ತ ಹೀನರಾದರೆ ಇಡೀ ಸಮಾಜವೇ ಆನಾರೋಗ್ಯಕ್ಕೆ ಒಳಗಾಗುವಂತಾಗಲಿದೆ ಎಂದರು.

ಐ.ಎ.ಐ.ಎಮ್ ನ ವೈದ್ಯಕೀಯ ಅಧಿಕಾರಿಯಾದ ಡಾ. ಭಾನುಪ್ರಿಯ ರವರು ಮಾತನಾಡಿ ” ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು 18 ರಿಂದ 60 ವಯಸ್ಸಿನ ಸ್ತ್ರೀಯರಲ್ಲಿ ಉಂಟಾಗುವ ರಕ್ತ ಹೀನತೆ ಸಮಸ್ಯೆಯನ್ನು ಗುರುತಿಸಿ ಅವರಿಗೆ ಉಚಿತವಾಗಿ 3 ತಿಂಗಳು ಔಷಧಿಯನ್ನು ಅಂದರೆ ದ್ರಾಕ್ಷಾವಲೇಹವನ್ನು ನೀಡುತ್ತೇವೆ ಇದನ್ನು ಬಿಸಿನೀರು ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಬಹುದು ಹಾಗೂ ನಿರಂತರವಾಗಿ ಅವರಿಗೆ ತಿಂಗಳಿಗೊಮ್ಮೆ ತಪಾಸಣೆ ನಡೆಸಿ ರಕ್ತ ಹೀನತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ” ಎಂದು ತಿಳಿಸಿದರು.

ಶಿಬಿರದ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸುದರ್ಶನ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐ. ಎ. ಐ. ಎಮ್ ನ ಶುಕ್ಲಾ ಆರ್ , ಸ್ನೇಹ ಸಿಂಗ್, ಸ್ವಾತಿ, ಚೈತ್ರ ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ದಿವ್ಯಶ್ರೀ, ವರುಣ್ ರಾಜ್, ನಂಜಪ್ಪ, ಸುಷ್ಮಾ, ಭಾರತಿ ಹಾಗೂ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ (ರಿ.) ನ ಮುರುಳಿ, ನವೀನ್ ಕುಮಾರ್,ಸರಸ್ವತಿ, ಲಾವಣ್ಯ, ಮತ್ತು ಸಂಧ್ಯಾ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!