28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ಆರೋಪಿ ಬಂಧನ: ಬಂಧಿತನಿಂದ 522 ನಕಲಿ ಅಂಕಪಟ್ಟಿಗಳ ವಶ

ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆಯಾಗಿದೆ. ಭಾರತದಾದ್ಯಂತ ವಿವಿಧ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ಆರೋಪಿಯ ಬಂಧನ. ಸದ್ಯ ಬಂಧಿತನಿಂದ ಬರೋಬ್ಬರಿ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, 2 ಲ್ಯಾಪ್‌ ಟಾಪ್, 1 ಪ್ರಿಂಟರ್​​, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್​​ಗಳು, ಎಟಿಎಂ ಕಾರ್ಡ್ ಮತ್ತು ಆರೋಪಿಯ 123 ನಕಲಿ ಐಡಿಗಳು, ಆರೋಪಿಯ 85 ಬ್ಯಾಂಕ್ ಅಕೌಂಟ್​​​ಗಳನ್ನು ಹಾಗೂ 1,20,000/- ನಗದು ಹಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಂತರ್ ರಾಜ್ಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಅವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.

ದೆಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ. ನವದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್​ನಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿ ರಾಜೀವ ಸಿಂಗ್ ಆರೋರಾ ಕಳೆದ ಏಳೆಂಟು ವರ್ಷಗಳಿಂದ ನಕಲಿ ಅಂಕ ಪಟ್ಟಿ ತಯಾರಿ ಮಾಡುತ್ತಿದ್ದ. ಪಿಯುಸಿ, ಡಿಪ್ಲೋಮಾ ಇನ್ ಎಜುಕೇಶನ್, ಡಿಪ್ಲೋಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಾಕ್ಟರ್ ಆಫ್ ಫಿಲಾಸಫಿ, ಬಿ ಟೇಕ್ ಸೇರಿ ವಿವಿಧ ಕೋರ್ಸ್​​ಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

Ramesh Babu

Journalist

Recent Posts

” ಹೊಸ ವರುಷ ಎಂಬುದೇನಿಲ್ಲ ಅರಿತವಗೆ…”

2026ಕ್ಕೆ ಕೆಲವೇ ಗಂಟೆಗಳು ಇರುವಾಗ.......... ಒಂದು ಜೀವನದ ಇಲ್ಲಿಯವರೆಗಿನ ನೆನಪಿನ ಪಯಣ......... " ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ…

3 hours ago

ಪರಿಶಿಷ್ಟರ ಮೇಲಿನ ದೌರ್ಜನ್ಯವನ್ನು ಆಯೋಗ ಸಹಿಸುವುದಿಲ್ಲ-ಡಾ.ಎಲ್ ಮೂರ್ತಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ಆಯೋಗವು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ…

15 hours ago

ಉನ್ನಾವೋ…..

  ಉನ್ನಾವೋ........ ಉನ್ನಾವೋ ಅತ್ಯಾಚಾರ, ಕುಲದೀಪ್ ಸಿಂಗ್ ಸೇಂಗರ್, ದೆಹಲಿ ಹೈಕೋರ್ಟ್ ಜಾಮೀನು ತೀರ್ಪು, ಭಾರತ ನ್ಯಾಯಾಂಗ ವ್ಯವಸ್ಥೆಯ ಕಾರ್ಯ…

16 hours ago

ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಅವಾಜ್… ಬಿತ್ತು ಎಫ್ ಐಆರ್..!

ಡ್ರಿಂಕ್ & ಡ್ರೈವ್ ಪ್ರಕರಣ ಪರಿಶೀಲನೆ ವೇಳೆ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿರುವ ಘಟನೆ ಬೆಂಗಳೂರು…

18 hours ago

ಕಾಳು ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಕಾಳು ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ಸುಮಾರು 2 ಗಂಟೆಯಲ್ಲಿ ದೊಡ್ಡಬಳ್ಳಾಪುರ ಹೊರಹೊಲಯದಲ್ಲಿರುವ ಹೊಸಹುಡ್ಯ ಗ್ರಾಮದಲ್ಲಿ…

21 hours ago

ಜ್ಯೂಯಲರಿ ಶಾಪ್ ಮಾಲೀಕರಿಗೆ ಶಾಪ್ ಗಳ ಭದ್ರತೆಗೆ ಬಗ್ಗೆ ಅರಿವು ಮೂಡಿಸಿದ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಗ್ರಾಮಾಂತರ ಠಾಣಯಲ್ಲಿ ಜ್ಯೂಯಲರಿ ಶಾಪ್ ಮಾಲೀಕರುಗಳಿಗೆ, ಜ್ಯೂಯಲರಿ…

22 hours ago