ಸುಮಾರು 26 ಪ್ರಕರಣಗಳಲ್ಲಿ ವಾದ ಮಂಡನೆ ಮಾಡಿ ಎಲ್ಲಾ ಪ್ರಕರಣಗಳನ್ನು ಗೆದ್ದಿದ್ದ ಕೀನ್ಯಾದ ಹೈಕೋರ್ಟ್‌ನ ನಕಲಿ ವಕೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ.
ಬ್ರಿಯಾನ್ ಮ್ವೆಂಡಾ, ನಕಲಿ ವಕೀಲ ಎಂದು ಗುರುತಿಸಲಾಗಿದೆ. ಬಂಧಿತ ನಕಲಿ ವಕೀಲ ಮೆಂಡ್ವಾನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
26 ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್‌ಗಳು, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದ ನಕಲಿ ವಕೀಲ ಮ್ವೆಂಡಾ. ಮ್ವೆಂಡಾ ಎಲ್ಲರ ಮುಂದೆ ನಿಜವಾದ ವಕೀಲನಂತೆ ನಟಿಸುತ್ತಿದ್ದ ಎನ್ನಲಾಗಿದೆ.
ಕೀನ್ಯಾದ ಲಾ ಸೊಸೈಟಿಯ ನೈರೋಬಿ ಶಾಖೆಯ ರಾಪಿಡ್ ಆಕ್ಷನ್ ತಂಡಕ್ಕೆ ಈತನ ವಿಚಾರವಾಗಿ ಸಾರ್ವಜನಿಕ ದೂರುಗಳು ಸಲ್ಲಿಕೆಯಾಗಿದ್ದವು. ನಂತರ, ವಕೀಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಮ್ವೆಂಡಾನನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಕೀನ್ಯಾದ ಲಾ ಸೊಸೈಟಿಯ ನೈರೋಬಿ ಬ್ರಾಂಚ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟಪಡಿಸಿದೆ.