21 ವರ್ಷದೊಳಗೆ ನೀವು ಏನು ಸಾಧಿಸದೆ ಇದ್ದಲ್ಲಿ ಸಮಾಜ ನಿಮ್ಮನ್ನು ಗುರುತಿಸುವುದು ಕಷ್ಟ- ಉಪನ್ಯಾಸಕ ಬೊಮ್ಮಸಂದ್ರ ರಾಮಕೃಷ್ಣ

ದೇಶದಲ್ಲಿ ಹಲವು ಸಂಘಟನೆಗಳಿವೆ. ಎಬಿವಿಪಿ ಬರಿ ಹಣೆ ಮೇಲೆ ನಾಮ ಇರುವುದಕ್ಕೆ ಸೀಮಿತವಾಗಿದೆ. ಸಮಾಜವಾದ ಎಂದರೆ ಅವರಿಗೆ ಆಗದು, 21 ವರ್ಷದ ಒಳಗೆ ನೀವು ಏನು ಸಾಧಿಸದೆ ಇದ್ದಲ್ಲಿ ಸಮಾಜ ನಿಮ್ಮನ್ನು ಗುರುತಿಸುವುದು ಕಷ್ಟ. ವಿದ್ಯಾರ್ಥಿಗಳು ಬದಲಾವಣೆಗೆ ಮನಸ್ಸು ಮಾಡಬೇಕು. ದೇಶದಲ್ಲಿನ ಆಗುಹೋಗುಗಳಿಗೆ ಸ್ಪಂದಿಸಬೇಕು. ಈ ಮನೋಭಾವವನ್ನು ನಾವೆಲ್ಲ ಬೆಳೆಸಿಕೊಂಡು ಸಾಮಾಜಿಕ ಹಾಗೂ ರಾಜಕೀಯವಾಗಿ ಬದಲಾವಣೆ ತರಬೇಕು ಎಂದು ಎಸ್ ಎಫ್ ಐ ಮಾಜಿ ಮುಖಂಡರು ಹಾಗೂ ಶಾರದಾ ಕಾಲೇಜಿನ ಉಪನ್ಯಾಸಕರಾದ ಬೊಮ್ಮಸಂದ್ರ ರಾಮಕೃಷ್ಣ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಮುಳಬಾಗಿಲು ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಶಿವಪ್ಪರವರು ಮಾತನಾಡಿ, ಮುಳಬಾಗಿಲು ತಾಲೂಕಿನಲ್ಲಿ ಎಸ್ ಎಫ್ ಐನ ಕೊಡುಗೆಗಳು ಬಹಳಷ್ಟು ಇವೆ. ಬಸ್ಸಿನ ಸಮಸ್ಯೆ, ಶಾಲೆಯಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಎಸ್ ಎಫ್ ಐ ಹೋರಾಟ ನಡೆಸಿ ಜಯಗಳಿಸಿದೆ. ಶಿಕ್ಷಣದಲ್ಲಿ ಖಾಸಗೀಕರಣದಿಂದಾಗಿ ವಿದ್ಯಾರ್ಥಿಗಳು ಶುಲ್ಕ ಕಟ್ಟದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಶಾಲೆಗೆ ಕೇಸರಿ ಶಾಲು, ಹಿಜಾಬ್ ಹಾಕಿಕೊಂಡು ಬನ್ನಿ ಎಂದು ಸರ್ಕಾರಗಳು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿವೆ. ಇದರ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದು ಸೂಚಿಸಿದರು.

ತದನಂತರ ಎಸ್ ಐ ತಾಲೂಕು ಕಾರ್ಯದರ್ಶಿ ಸುದರ್ಶನ್ ಮಾತನಾಡಿ, ಎಸ್ ಎಫ್ ಐ ಹೋರಾಟಗಳಿಂದ ಮುಳಬಾಗಿಲು ತಾಲೂಕಿನಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅಭಿವೃದ್ಧಿಯಾಗಿದೆ. ಇದಕ್ಕೆ ಉದಾಹರಣೆ ಹಿಂದಿನ ವರ್ಷ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕೆಂದು ಒತ್ತಾಯಿಸಲಾಗಿತ್ತು. ಪ್ರಥಮ ದರ್ಜೆ ಕಾಲೇಜಿನಲ್ಲಿ ಕೂಡ ಕ್ಯಾಂಟೀನ್ ತೆರೆಯಬೇಕು ಎಂದು ಮನವಿ ನೀಡಲಾಗಿತ್ತು. ಈಗ ಎರಡು ಕಟ್ಟಡಗಳು ಕಾಮಗಾರಿ ಪೂರ್ತಿಯಾಗಿವೆ. ಹಾಗೆಯೇ ಅವುಗಳನ್ನು ಆದಷ್ಟು ಬೇಗ ಉದ್ಘಾಟನೆಯನ್ನು ನಡೆಸಿ ಜನರ ಮುಂದೆಗೆ ತರಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಇಲ್ಲದಿದ್ದರೆ ಇನ್ನೂ ದೊಡ್ಡ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಸ್ ಎಫ್ ತಾಲೂಕು ಸಮಿತಿ ಅಧ್ಯಕ್ಷರಾದ ಶಶಿಕುಮಾರ್, ತಾಲೂಕು ಕಾರ್ಯದರ್ಶಿ ಸುದರ್ಶನ್, ತಾಲೂಕು ವಿದ್ಯಾರ್ಥಿನಿಯರು, ಉಪಸಮಿತಿಯ ಸಂಚಾಲಕಿ ಲಿನಿತ ಹಾಗೂ ಸಮಿತಿ ಸದಸ್ಯರಾದ ಅಜಯ್ ಸುಭಾಷ್ ಅರ್ಚನಾ ಸೇರಿದಂತೆ ಮುಂತಾದವರಿದ್ದರು.

*ನೂತನ ತಾಲೂಕು ಸಮಿತಿ*

 *ತಾಲೂಕು ಅಧ್ಯಕ್ಷರು ಅರ್ಚನಾ

*ತಾಲೂಕು ಕಾರ್ಯದರ್ಶಿ ಸುದರ್ಶನ್(ಮರು ಆಯ್ಕೆ)

*ತಾಲೂಕು ಉಪಾಧ್ಯಕ್ಷರು ಸುಭಾಷ್ ಹಾಗೂ ಮುರಳಿ

*ತಾಲೂಕು ಸಹಕಾರ್ಯದರ್ಶಿಗಳಾಗಿ ಧನುಷ್ ಕುಮಾರ್, ಅನುಷಾ, ಫಿಜಾ ನೂರೈನ್,*

*ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನ್ ಸಾಗರ್ ಮನೋಜ್ ಧನಂಜಯ ಪ್ರದೀಪ್ ರಾಕೇಶ್ ಮಾಲತಿ ರಮ್ಯಾ ನಾಗೇಶ್ ರಶ್ಮಿ ಆಯ್ಕೆಯಾದರು…

Leave a Reply

Your email address will not be published. Required fields are marked *

error: Content is protected !!