ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ತೆಂಗು, ಮಾವು, ಸೀಬೆ, ನುಗ್ಗೆ, ಕರಿಬೇವು, ನೆಲ್ಲಿ ಮತ್ತು ನಿಂಬೆ ಕಸಿ/ಸಸಿಗಳನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ದರದಲ್ಲಿ ಖರೀದಿಸಲು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
2023ರ ಎಪ್ರಿಲ್ ಅಂತ್ಯಕ್ಕೆ ತೋಟಗಾರಿಕೆ ಇಲಾಖೆಯಡಿ ಒಟ್ಟಾರೆ ಉಳಿಕೆ ಕಸಿ/ಸಸಿಗಳ ವಿವರ:
ಕನ್ನಮಂಗಲ ನರ್ಸರಿಯಲ್ಲಿ ಮಾವು-3596, ಸೀಬೆ-3510, ನಿಂಬೆ-1830, ತೆಂಗು-9485, ಪಪ್ಪಾಯ-1977 , ನುಗ್ಗೆ-1262, ಕರಿಬೇವು-1977, ಇತರೆ (ಅಲಂಕಾರಿಕ ಗಿಡಗಳು)-6968, ಒಟ್ಟು-30605 ಗಿಡಗಳಿವೆ.
ನಗರೂರು ನರ್ಸರಿಯಲ್ಲಿ ತೆಂಗು-8550, ಇತರೆ (ಅಲಂಕಾರಿಕ ಗಿಡಗಳು)-2200
ಒಟ್ಟು-10750 ಗಿಡಗಳಿವೆ.
ದೊಡ್ಡಬಳ್ಳಾಪುರ ನರ್ಸರಿಯಲ್ಲಿ ತೆಂಗು-10650, ಅಡಿಕೆ-2000, ನುಗ್ಗೆ-990, ಕರಿಬೇವು-990, ಇತರೆ (ಅಲಂಕಾರಿಕ ಗಿಡಗಳು)-3402, ಒಟ್ಟು-18032 ಗಿಡಗಳಿವೆ.
ತಿಪ್ಪಗೊಂಡನಹಳ್ಳಿ ನರ್ಸರಿಯಲ್ಲಿ ಮಾವು-3000, ಸೀಬೆ-3000, ನಿಂಬೆ-3282, ತೆಂಗು-13300,ಅಡಿಕೆ- 20000,ನುಗ್ಗೆ-1918, ಕರಿಬೇವು-700, ಇತರೆ(ಅಲಂಕಾರಿಕ ಗಿಡಗಳು)- 235, ಒಟ್ಟು-45435 ಗಿಡಗಳಿವೆ.
ಕೆ.ಪೂಜೇನಹಳ್ಳಿ ನರ್ಸರಿಯಲ್ಲಿ ಮಾವು-1718, ಸೀಬೆ-3000, ನಿಂಬೆ-1130, ತೆಂಗು-10125, ಇತರೆ(ಅಲಂಕಾರಿಕ ಗಿಡಗಳು)-300 , ಒಟ್ಟು-16273 ಗಿಡಗಳಿವೆ.
ಒಟ್ಟು ಜಿಲ್ಲೆಯಲ್ಲಿ 8314ಮಾವು, 9510ಸೀಬೆ, ನಿಂಬೆ 6242, ತೆಂಗು52110, ಪಪ್ಪಾಯ1977, ಅಡಿಕೆ22000, ನುಗ್ಗೆ4170, ಕರಿಬೇವು3667, ಇತರೆ(ಅಲಂಕಾರಿಕ ಗಿಡಗಳು) 13105, ಒಟ್ಟು121095 ಗಿಡಗಳಿವೆ.
ಹೆಚ್ಚಿನ ಮಾಹಿತಿಗಾಗಿ
ಲಕ್ಷ್ಮಿ ಜೆ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ:9449045052,
ಸ್ಮಿತಾ ಎಂ.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೆ.ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರ: 9035958286,
ಶಾಮಣ್ಣ.ಎಸ್.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕನ್ನಮಂಗಲ ಮಾವು ಉತ್ಕೃಷ್ಟ ಕೇಂದ್ರ: 7338011518,
ವಿಜಯ್ ಕುಮಾರ್ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ: 9035720179,
ಶಿವಾನಂದ್, ತೋಟಗಾರಿಕೆ ಸಹಾಯಕರು, ದೊಡ್ಡಬಳ್ಳಾಪುರ ತೋಟಗಾರಿಕೆ ಕ್ಷೇತ್ರ: 9164021289 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಾದ ಗುಣವಂತ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.