
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಬಜೆಟ್ ಮಂಡನೆಯಾಗಿವೆ. ರಾಜ್ಯಪಾಲರಿಂದ ಮೂರು ಭಾಷಣಗಳು ನಡೆದಿವೆ. ಮೂರು ಬಜೆಟ್ ನಲ್ಲಿ ಈ ರಾಜ್ಯದ ಮಧ್ಯಮ ವರ್ಗ, ದುಡಿಯುವ ಕೈಗಳಿಗೆ, ರೈತರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯವಾಗಿದೆ. ಗ್ಯಾರೆಂಟಿಗಳೇ ಪ್ರಪಂಚ, ಗ್ಯಾರೆಂಟಿಗಳಿಂದಲೇ ದೇಶ, ರಾಜ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಇದಕ್ಕೆ ವಿರುದ್ಧವಾಗಿ ಜನ ದಂಗೆ ಏಳುತ್ತಿದ್ದಾರೆ. ಮಧ್ಯಮ ವರ್ಗ, ದುಡಿಯುವ ಕೈಗಳಿಗೆ, ರೈತರ ಅಭಿವೃದ್ಧಿಗೆ ಒಂದಾದರೂ ಹೊಸ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯನವರು ಈ ಬಾರಿಯಾದರೂ ಬಜೆಟ್ ನಲ್ಲಿ ಅಳವಡಿಸಬೇಕು. ಈ ಹಿಂದೆ ಅಂದರೆ 2013-18ರಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಒಂದು ಚೂರಾದರೂ ಗೌರವ ಇತ್ತು. ಆದರೆ, ಇತ್ತೀಚೆಗೆ ಅಂದರೆ ಮೂರು ವರ್ಷಗಳಿಂದ ಆ ಗೌರವ ನಶಿಸಿಹೋಗುತ್ತಿದೆ. ಸಿಎಂ ಸಿದ್ದರಾಮಯ್ಯನವರೇ ನಾವು ಅಂದರೆ ಬಿಜೆಪಿಯವರು ನಿಮ್ಮನ್ನ ಟೀಕೆ ಮಾಡಿದರೆ ಅದು ನಿಮಗೆ ಗೊತ್ತಾಗಲ್ಲ. ದಯವಿಟ್ಟು ರಾಜ್ಯದಲ್ಲಿ ಒಂದು ಸರ್ವೇ ನಡೆಸಬೇಕು, ಆ ಸರ್ವೇಯಲ್ಲಿ ಗೊತ್ತಾಗುತ್ತೆ ನಿಮ್ಮ ಹೆಸರು ಯಾವರೀತಿ ಕುಗ್ಗುತ್ತಿದೆ ಎಂದು ಗೊತ್ತಾಗುತ್ತೆ. 2013-18ರಲ್ಲಿ ಇದ್ದ ವರ್ಚಸ್ಸು ಕಳೆದ ಮೂರು ವರ್ಷಗಳಿಂದ ಯಾವ ರೀತಿ ಹಾಳಾಗುತ್ತಿದೆ ಎಂಬುದು ತಿಳಿಯುತ್ತದೆ. ನಿಮ್ಮ ಹೆಸರು ನೀರುಪಾಲಾಗುತ್ತಿದೆ. ಬೆಂಕಿಯಲ್ಲಿ ಆಹುತಿಯಾಗುವ ರೀತಿಯಲ್ಲಿ ಹಾಳಾಗುತ್ತಿದೆ. ದಯವಿಟ್ಟು, ದೇವರು ನಿಮಗೆ ಒಂದು ಅವಕಾಶ ಕೊಟ್ಟಿದ್ದಾನೆ, ಈ ಬಜೆಟ್ ನಲ್ಲಿಯಾದರೂ ಮಧ್ಯಮ ವರ್ಗ, ದುಡಿಯುವ ಕೈಗಳು, ರೈತರಿಗೆ ಒಳಿತಾಗುವ ರೀತಿಯಲ್ಲಿ ಅನುದಾನ ನಿಗದಿಪಡಿಸಿ ಎಂದು ಶಾಸಕ ದೀರಜ್ ಮುನಿರಾಜ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿಮ್ಮ ನಿಮ್ಮ ಒಳ ಜಗಳದಲ್ಲಿ ನೀರಾವರಿ, ಬೆಂಗಳೂರು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ, ಬೆಂಗಳೂರಿನ ಮೂಲಕ ರಾಜ್ಯವನ್ನು ನೋಡುವಂತಹದ್ದು, ಆದ್ದರಿಂದ ಎಸ್ ಎಂ ಕೃಷ್ಣ, ಯಡಿಯೂರಪ್ಪ, ಕುಮಾರಸ್ವಾಮಿ ಅವರು ಬೆಂಗಳೂರನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರು ಮಾಡಿರುವ ಅಭಿವೃದ್ಧಿಯನ್ನು ಜನ ಈಗಲೂ ನೆನೆಸಿಕೊಳ್ಳುತ್ತಾರೆ. ಅದರ ಮುಂದುವರಿದ ಭಾಗವಾಗಿ ನೀವು ಸಹ ಅಭಿವೃದ್ಧಿ ಮಾಡಬೇಕು ಎಂದರು.
ಏನಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದರೆ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟಬುತ್ತಿ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ವರ್ಚಸ್ ಕುಗ್ಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಘನತೆ, ಗೌರವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರಕ್ಕೆ ವಿಶೇಷವಾಗಿ 25ಕೋಟಿ ವೆಚ್ಚದಲ್ಲಿ ರೇಷ್ಮೆ ಇಲಾಖೆಯಿಂದ ಜವಳಿ ಇಲಾಖೆಗೆ ನಾವು ಏನು ಎರಡು ಎಕರೆ ವರ್ಗಾಯಿಸಿದ್ದೇವೆ ಅದರಲ್ಲಿ ಮಾರಾಟ ಮಳಿಗೆಗಳನ್ನು ಮಾಡಲು 25 ಕೋಟಿ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಅದಕ್ಕೆ ಅನುಮೋದನೆ ನೀಡಬೇಕು. ನೇಕಾರರ ಬದುಕು ಇಂದು ದುಸ್ತಿಗೆ ಬಂದು ತಲುಪಿದೆ. ರೈತರು, ನೇಕಾರರು ಕಂಗಾಲಾಗುವ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲಾಸ್ಪತ್ರೆಗೆ ಅಗತ್ಯ ಅನುದಾನ ನೀಡಬೇಕು. 42ಎಕರೆ ಜಾಗದಲ್ಲಿ ವಸತಿ ಯೋಜನೆ ಕಲ್ಪಿಸುವಂತೆ ವರದಿ ಸಲ್ಲಿಸಿದ್ದೇವೆ. ಈ ವಸತಿ ಯೋಜನೆಯಲ್ಲಿ ಒಂದು ಎಕರೆಯಲ್ಲಿ ನೂರು ಮನೆ ಸ್ಯಾಂಕ್ಷನ್ ಮಾಡಲಾಗುತ್ತದೆ. 2004ನೇ ಸಾಲಿನಿಂದ 1500 ಜನ ಅರ್ಜಿಯನ್ನ ಸಲ್ಲಿಸಿ 500 ರೂ. ಹಣ ಕಟ್ಟಿ ಸುಮ್ಮನೆ ಕುಳಿತ್ತಿದ್ದಾರೆ. 42ಎಕರೆಯಲ್ಲಿ 4,200 ಮನೆ ಕಟ್ಟಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದನ್ನು ಬಜೆಟ್ ನಲ್ಲಿಟ್ಟು ಅನುಮೋದಿಸಬೇಕು ಎಂದರು.
ಜಗತ್ತು ಆಧುನಿಕ ತಂತ್ರಜ್ಞಾನದಿಂದ ಮುನ್ನುಗ್ಗುತ್ತಿರುವ ಈ ಸಮಯದಲ್ಲಿ ಇಡೀ ವಿಶ್ವವೇ, ವಿಶ್ವಸಂಸ್ಥೆಯೇ ನೋಡುವ ಇವಿಎಂ ಅನ್ನು ಕಾಂಗ್ರೆಸ್ ಸರ್ಕಾರ ಕ್ಯಾನ್ಸಲ್ ಮಾಡಿ ಬ್ಯಾಲೆಟ್ ಪೇಪರ್ ತರುವ ವ್ಯವಸ್ಥೆಗೆ ಅನುಮೋದನೆ ನೀಡಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರಲ್ಲೂ ಕೂಡ ಮತದಾರರು ತಕ್ಕ ಪಾಠ ಕಾಂಗ್ರೆಸ್ ಗೆ ಕಲಿಸಲಿದ್ದಾರೆ ಎಂದರು.
ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಹಿರಿಯ ಮುಖಂಡರಾದ ಕೆ.ಎಚ್ ಹನುಮಂತರಾಯಪ್ಪ, ಗೋಪಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ವೆಂಕಟೇಶ್, ನಗರಾಧ್ಯಕ್ಷ ಮುದ್ದಪ್ಪ, ಮಂಜುನಾಥ ಇದ್ದರು.