ಹ್ಯಾಂಗ್ ಝೂನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಟೆನ್ನಿಸ್ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಚೈನೀಸ್ ತೈಪೆ ವಿರುದ್ಧ 2-6 6-3 10-4 ಗೆಲುವು ಸಾಧಿಸುವ ಮೂಲಕ ಮಿಶ್ರ ಡಬಲ್ಸ್ ನಲ್ಲಿ ಚಿನ್ನ ಪದಕವನ್ನ ಮುಡಿಗೇರಿಸಿಕೊಂಡಿದ್ದಾರೆ.
ಈ ಗೆಲುವು 21 ನೇ ಶತಮಾನದಲ್ಲಿ 6 ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಕನಿಷ್ಠ ಒಂದು ಚಿನ್ನದ ಪದಕವನ್ನು ಸಾಧಿಸಿದ ಭಾರತದ ದಾಖಲೆಯನ್ನು ಮುಂದುವರೆಸಿದೆ.